ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯವ್ಯಾಪಿಯಾಗಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸಿಹಿ ಮತ್ತು ಹಣ್ಣು ವಿತರಣೆ ಹಮ್ಮಿಕೊಳ್ಳಲಾಗಿದ್ದು, ಇಂದು ವಿನೋಬನಗರದ ಮಾದವ ನೆಲೆ ಮತ್ತು ಜೀವನ ಸಂಜೆ ವೃದ್ಧಾಶ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸದ್ಯ ಕೆ. ಈ. ಕಾಂತೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಸಿ.ಹೆಚ್. ಮಾಲತೇಶ್, ಮೋರ್ಚಾದ ನಗರಾಧ್ಯಕ್ಷ ಕೆ. ಹೆಚ್. ಮಹೇಶ್, ಪ್ರಮುಖರಾದ ಹಿರಣ್ಣಯ್ಯ, ಸೋಗಾನೆ ರಮೇಶ್, ಪುರುಷೋತ್ತಮ, ಪಾಲಿಕೆ ಸದಸ್ಯರಾದ ಕೆ. ಟಿ. ಶ್ರೀನಿವಾಸ್, ಎಂಎಸ್‌ಐಎಲ್ ನಿರ್ದೇಶಕರಾದ ವೆಂಕಟೇಶ್ ನಾಯ್ಡು, ಚಂದ್ರಶೇಖರ್, ವಿನೋಬನಗರದ ಸ್ಥಳೀಯ ಕಾರ್ಯಕರ್ತರು, ಜಿಲ್ಲಾ ಮುಖಂಡರು, ನಗರ ಸಮಿತಿಯ ಪ್ರಮುಖರು, ಹಾಗೂ ಪಕ್ಷದ ಮುಖಂಡರು ಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post