ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ರಾಜ್ಯ ಪ್ರವಾಸೋದ್ಯಮ ಟಾಸ್ಕ್‌ಫೋರ್ಸ್ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಟಾಸ್ಕ್‌ಫೋರ್ಸ್ ರಚನೆಗೊಂಡ ಮೊದಲ ರಾಜ್ಯ ಕರ್ನಾಟಕವೇ ಆಗಿದೆ. ಅವರ ಹುಟ್ಟು ಹಬ್ಬಕ್ಕೆ ನಮ್ಮ ಅಭಿಮಾನದ ಅಭಿನಂದನೆಗಳು ಎಂದು ಶುಭಾಶಯ ವ್ಯಕ್ತಪಡಿಸಿದರು.
ಉಡುತಡಿ, ನಗರಕೋಟೆ, ಶಿವಪ್ಪನಾಯಕ ಅರಮನೆ, ಸಾಗರ ಗಣಪತಿ ಕೆರೆ, ಸಕ್ರೆಬೈಲಿನಲ್ಲಿ ಆನೆಕ್ಯಾಂಪ್, ಜೈವಿಕ ಉದ್ಯಾನ, ಸಿಂಹಧಾಮ ಅಭಿವೃದ್ಧಿ, ಕವಲೇದುರ್ಗ ಅಭಿವೃದ್ಧಿ, ಸಿಗಂಧೂರು ಸೇತುವೆ, ಜೋಗ ಅಭಿವೃದ್ಧಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳನ್ನು ಉನ್ನತ ಮಟ್ಟಕ್ಕೆ ಏರಿಸಿದ್ದಾರೆ. ಹಾಗಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಸ್ವಾಗತಿಸುತ್ತೇವೆ ಎಂದರು.
ಅ.ನಾ.ವಿಜಯೇಂದ್ರ, ವಿಜಯ್‌ಕುಮಾರ್, ಎನ್.ಗೋಪಿನಾಥ್, ಬಳ್ಳಕೆರೆ ಸಂತೋಷ್, ಮಂಜುನಾಥ ಶರ್ಮ, ಕೆ.ದಿವಾಕರ ಶೆಟ್ಟಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post