ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಳೂರು ಸಮೀಪದ ಮಹಿಶಿಯಲ್ಲಿ ಮೂರು ದಿನಗಳ ಕಾಲ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ 26ನೇ ಯತಿವರೇಣ್ಯರಾದ ಶ್ರೀ ಸತ್ಯಸಂದ ಮಹಾ ಗುರುಗಳ 231ನೇ ಆರಾಧನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಮಹಾ ಸ್ವಾಮೀಜಿ ಸಾನಿಧ್ಯದಲ್ಲಿ ಆರಾಧನಾ ಮಹೋತ್ಸವದ ಸಕಲ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ಸಂಪನ್ನಗೊಂಡವು. ಕೂಡಲಿ ಮಠದ ಶ್ರೀ ರಘು ವಿಜಯ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಇಬ್ಬರು ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿ, ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಮತ್ತು ಮಂಗಳಾರತಿಗಳನ್ನು ಸಮರ್ಪಿಸಿ, ಭಕ್ತರಿಗೆ ಫಲ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು.

ಮಾನವ ಜನ್ಮ ದೊರೆತಿರುವಾಗ ನಾವು ಭಾರತೀಯ ಸನಾತನ ಪರಂಪರೆಯ ಶಾಸ್ತ್ರ ವೇದಗಳನ್ನು ಅಧ್ಯಯನ ಮಾಡುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಕೆಟ್ಟ ಕೆಲಸಗಳು ಮಾತ್ರವಲ್ಲ ದುಷ್ಟ ಆಲೋಚನೆಗಳು ಕೂಡ ನಮ್ಮ ಸಾಧನೆಗೆ ಮಾರಕವಾಗುತ್ತವೆ. ವ್ರತ ನಿಯಮ ಅನುಷ್ಠಾನಗಳನ್ನು ಮಾಡುವ ಮೂಲಕ ಆತ್ಮ ಸಾಧನೆ ಅತ್ತ ಮುನ್ನುಗಬೇಕು ಈ ನಿಟ್ಟಿನಲ್ಲಿ ಶ್ರೀ ಸತ್ಯಸಂದ ತೀರ್ಥ ರೂ ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಸಲಹೆ ನೀಡಿದರು.

ಯುವ ವಿದ್ವಾಂಸರಾದ ವೆಂಕಟೇಶ ಜಯ ಮಂಗಳ ಅವರು ಪ್ರವಚನ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಂದ ಗುರುಗಳ ಮೂಲ ವೃಂದಾವನ ಕೆ ವಿಶೇಷ ಅಲಂಕಾರ ಸಹಕಾರೋತ್ಸವ ಭಜನೆ ಶಾಸ್ತ್ರೀ ಸಂಗೀತ ಗಾಯನ ಭಕ್ತರ ಜನಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post