ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸ್ಲಿಮರ ಮನಸ್ಸುಗಳನ್ನು ಜಾಗೃತಗೊಳಿಸಲು ಹಿಂದೂ ಸಮಾಜವೇ ಎದ್ದು ನಿಲ್ಲಬೇಕಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರ್ಕಾರ ಮುಸಲ್ಮಾನರ ಓಲೈಕೆಯನ್ನು ಬಿಡುವುದಿಲ್ಲ. ಅದು ಅವರಿಗೆ ಅಗತ್ಯವಾಗಿದೆ. ಎಲ್ಲಾ ಮುಸ್ಲಿಂರು ಗೂಂಡಗಳೇನು ಅಲ್ಲ, ಆದರೆ ಕೆಲವರು ಗೂಂಡಾಗಳಾಗುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಸರ್ಕಾರ ನಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆ ಬೆಳೆದು ಬಿಟ್ಟಿದೆ. ಸರ್ಕಾರವೇ ಮುಸಲ್ಮಾನರ ರಾಜ್ಯವಾಗಿದೆ. ಯಾವುದೇ ಬಿಗಿ ಕ್ರಮ ಇಲ್ಲಿ ಇಲ್ಲ, ಹಾಗಾಗಿ ಹಿಂದೂ ಸಮಾಜವೇ ಜಾಗೃತವಾಗಬೇಕಾಗಿದೆ. ಅವರ ಕೆಟ್ಟ ಮನಸ್ಸುಗಳನ್ನು ತಿದ್ದಬೇಕಾಗಿದೆ ಎಂದರು.
ಇದು ಸಾಧ್ಯವಿದೆ ಉದಾಹರಣೆಗೆ ಧರ್ಮಸ್ಥಳದ ವಿಷಯವೇ ಕಾರಣವಾಗಿದೆ. ಧರ್ಮಸ್ಥಳದ ಬಗ್ಗೆ ಈಗ ಜನರಲ್ಲಿ ಒಳ್ಳೆಯ ಭಾವನೆ ಮೂಡುತ್ತಿದೆ. ಆದರೂ ಕೂಡ ಮಂಡ್ಯ, ಹುಬ್ಬಳ್ಳಿಯಂತಹ ನಗರಗಳಲ್ಲಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮುಂದುವರೆದಿದೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಈ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ ಎಂದು ಛೇಡಿಸಿದರು.
ಬ್ಯಾಲೇಟ್ ಪೇಪರ್ ಬಗ್ಗೆ ಖರ್ಗೆಯವರು ಈಗ ಮಾತನಾಡುತ್ತಿದ್ದಾರೆ. ಅವರು ಗೆದ್ದಾಗ ಮತಯಂತ್ರ ಸರಿ ಇರುತ್ತದೆ. ಸೋತಾಗ ಮತಯಂತ್ರ ಸರಿ ಇರುವುದಿಲ್ಲ. ಇದು ಅವರ ದ್ವಂದ್ವನೀತಿ. ಮತಯಂತ್ರವನ್ನು ಕೂಡ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ವಿಷಯವನ್ನು ಬೇರೆಡೆಗೆ ತಿರುಗಿಸುವ ಹುನ್ನಾರವಿದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post