ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲಾ ಸಂಸ್ಕೃತಿಯ ಆಭರಣಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ಅರ್ಬನ್ ಇಂಡಿಯಾ ಸಂಸ್ಥೆ ಸಂಸ್ಥಾಪಕಿ ನಿರಂಜನಿ ಹೇಳಿದರು.
ನಗರದ ಎಲ್.ಎಲ್.ಆರ್. ರಸ್ತೆಯಲ್ಲಿರುವ ಮೈತ್ರಿ ಮೈ ಜುವೆಲ್ಸ್ ಚಿನ್ನದ ಮಳಿಗೆಯಲ್ಲಿ ಆಯೋಜಿಸಲಾಗಿದ್ದ ಆ್ಯಂಟಿಕ್ ಚಿನ್ನದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರಿಗಾಗಿ ಆ್ಯಂಟಿಕ್ ಚಿನ್ನದ ಉತ್ಸವ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಮದುವೆ, ಹಬ್ಬ, ಶುಭ ಕಾರ್ಯಗಳಿಗೆ ಮೆರಗು ನೀಡಲು, ಮೈತ್ರಿ ಮೈ ಜ್ಯುವೆಲ್ಸ್ ಆಭರಣ ಮಳಿಗೆಯಲ್ಲಿ ಈ ಒಂದು ವಿನೂತನ ಆ್ಯಂಟಿಕ್ ಚಿನ್ನದ ಉತ್ಸವ ಗಮನ ಸೆಳೆಯುತ್ತಿದೆ ಎಂದರು.
ಮದುವೆ ಸಮಾರಂಭಗಳಿಗೆ, ಹಬ್ಬ-ಹರಿದಿನಗಳಿಗೆ ಆಭರಣಗಳನ್ನು ಕೊಂಡುಕೊಳ್ಳಲು ಮೈತ್ರಿ ಮೈ ಜ್ಯುವೆಲ್ಸ್ ಉತ್ತಮ ವೇದಿಕೆಯಾಗಿದೆ. ಶಿವಮೊಗ್ಗ ಸೇರಿದಂತೆ, ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಮೈತ್ರಿ ಮೈ ಜುವೆಲ್ಸ್ ನ ಆ್ಯಂಟಿಕ್ ಚಿನ್ನದ ಉತ್ಸವ ಸಹಕಾರಿಯಾಗಿದೆ ಎಂದರು.
ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳನ್ನು ಈ ಉತ್ಸವದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಎಲ್ಲಾ ಚಿನ್ನದ ಆಭರಣಗಳು, ಹಾಲ್ ಮಾರ್ಕ್ ಹೊಂದಿರುವುದು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಈ ಆಭರಣ ಉತ್ಸವದ ಮಳಿಗೆ ಆಭರಣ ಪ್ರಿಯ ಮಹಿಳೆಯರು ಮತ್ತು ಜನರ ಕಣ್ಣುಗಳಿಗೆ ರಸದೌತಣ ನೀಡಲಿದೆ ಎಂದರು.
Also read: ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ: ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ
ಈ ಸಂದರ್ಭದಲ್ಲಿ ಮೈತ್ರಿ ಮೈ ಜುವೆಲ್ಸ್ ನ ಸಿಇಓ ಸೆಂಥಿಲ್ ವೇಲನ್, ಸಂಸ್ಥೆ ನಿರ್ದೇಶಕಿ ಅನಿತಾ, ಬಾಲಸುಂದರಿ, ಬಿಲ್ಡರ್ ವನಿತಾ, ಸ್ವಪ್ನ ಬದರಿನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post