ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಅದು ಮಲೆನಾಡಿನ ಮಡಿಲಲ್ಲಿ ಅದರಲ್ಲೂ ಜಿಲ್ಲಾ ಕೇಂದ್ರದಲ್ಲೇ ಇದ್ದರೂ ನಿರ್ಲಕ್ಷಕ್ಕೆ ಒಳಗಾಗಿ ಕಣ್ಮರೆಯಾಗಿದ್ದ ಸುಂದರ ಹಾಗೂ ವಿಶಾಲವಾದ ಕೆರೆ. ಆದರೆ, ಈಗ ಅದು ಮರಳಿ ತನ್ನ ವೈಭವವನ್ನು ಪಡೆದುಕೊಂಡಿದ್ದು, ಇದಕ್ಕೆ ಕಾರಣರಾದವರು ಕೆಲವು ಪರಿಸರಾಸಕ್ತರು.
ಹೌದು… ಸಾಗರ ರಸ್ತೆಯಲ್ಲಿ, ವಾಜಪೇಯಿ ಬಡಾವಣೆಯ ಹಿಂದುಗಡೆ ಒಂದು ಕೆರೆ ಮಂಜಿ ಹೋಗಿತ್ತು. ಅದನ್ನು ಕೆಲವು ಪರಿಸರಾಸಕ್ತ ಮಿತ್ರರು ಸೇರಿ, ಹೊಸದಾಗಿ ಕೆರೆಯ ನಿರ್ಮಾಣವನ್ನು ಮಾಡಲಾಗಿದೆ.
ಸರ್ಕಾರ ಸುಮಾರು 60 ರಿಂದ 70 ಲಕ್ಷ ಖರ್ಚು ತೋರಿಸಬಹುದಾದ ಈ ಕೆರೆಯನ್ನು, ದಾನಿಗಳ ನೆರವಿನಿಂದ ಕೇವಲ ಎಂಟೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಕೆರೆ ಹೊಸದಾಗಿ ನಿರ್ಮಾಣ ಮಾಡಲಾಗಿದೆ.
ಇನ್ನು, ಇಲ್ಲಿನ ಹೂಳು ತೆಗೆಯುವುದು ಬಂಡು ಕಟ್ಟುವುದು, ಸುತ್ತಲು ಸುಮಾರು ಮೂರುವರೆ ಸಾವಿರ ಹಣ್ಣಿನ ಹೂವಿನ ಗಿಡಗಳನ್ನು ನೆಡುವುದು, ಸ್ವಾಭಾವಿಕ ಅರಣ್ಯವನ್ನು ಬೆಳೆಸುವುದು ಕಾರ್ಯಗಳು ನಡೆಯುತ್ತಿದೆ. ನಿನ್ನೆ ನನ್ನಿಂದ ವೃಕ್ಷಾರೋಪಣ ಕಾರ್ಯ. ಅದ್ಭುತವಾದ ಕೆಲಸವನ್ನು ಮಾಡಿ, ಸರ್ಕಾರವೇ ಬೆಚ್ಚಿಬೀಳುವಂತೆ ಕೆರೆ ನಿರ್ಮಾಣವಾಗಿದೆ. ಅದಕ್ಕೆ ಸರಿಯಾದ ರೀತಿಯಲ್ಲಿ ಸರ್ಕಾರ ಅಥವಾ ಸೂಡಾದವರು ಲೈಟು ಮತ್ತು ವಾಕಿಂಗ್ ಪಾತ್ ಮಾಡಿದರೆ ಅದ್ಭುತವಾದ ಪ್ರವಾಸಿ ತಾಣವಾಗುತ್ತದೆ. ದಾನಿಗಳ ನೆರವಿನಿಂದ ಅದನ್ನು ಮಾಡಲು ಪ್ರಯತ್ನಿಸಲಾಗಿದೆ.
ಬರಹ: ಶ್ರೀ ಲಕ್ಷ್ಮೀ ನಾರಾಯಣ ಕಾಶಿ
ಸದಸ್ಯರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್
ಗೌರವಾನ್ವಿತ ಸಲಹೆಗಾರರು, ಕಲ್ಪ ಮೀಡಿಯಾ ಹೌಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post