ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನಾ ವೈರಸ್ ತಂದೊಡ್ಡಿರುವ ಸಂಕಷ್ಟದಿಂದ ಉದ್ಯೋಗ, ಉದ್ಯಮದ ಮೂಲಕ ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ತಾಣಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಪ್ರತಿಭೆಗಳು ದೊಡ್ಡ ಸಂಖ್ಯೆಯಲ್ಲಿ (ಸುಮಾರು ಐವತ್ತರಿಂದರಿಂದ ಅರವತ್ತು ಸಾವಿರ) ಜಿಲ್ಲೆಗೆ ಹಿಂದಿರುಗಿದ್ದಾರೆ. ಈ ಹಿಂದಿರುಗುವ ಪ್ರತಿಭೆಗಳಿಗೆ ಸೂಕ್ತ ವಾತಾವರಣ ನಿರ್ಮಿಸಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ stay@shivamogga ಎಂಬ ಅಭಿಯಾನವನ್ನು ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆ ಆರಂಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ತಿಳಿಸಿದರು.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಮುಂದುವರೆದು ಯುವ ಪ್ರತಿಭೆಗಳಿಗೆ ಶಿವಮೊಗ್ಗ ಅಗತ್ಯವಿದೆ. ಶಿವಮೊಗ್ಗಕ್ಕೆ ಈ ಯುವ ಪ್ರತಿಭೆಗಳು ಬೇಕು, ಜೋಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಉದ್ಯಮಿಗಳು ಹಾಗೂ ಉದ್ಯೋಗಿಗಳಾಗಿ ನೆಲೆಸಲು ಇಚ್ಚಿಸುತ್ತಿರುವ ಈ ಪ್ರತಿಭೆಗಳು ಅವರವರ ಕ್ಷೇತ್ರಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳ ನಿರೀಕ್ಷೆಯಲ್ಲಿದ್ದಾರೆ. ಈ ನಿರೀಕ್ಷೆಗಳನ್ನು ಕಲೆ ಹಾಕಿ, ಒಂದು ಮೂರ್ತ ರೂಪ ಕೊಟ್ಟು ಮುಂದೆ ಸಾಗಬೇಕಾದ ಹಾದಿಯ ಚಿಂತನೆಯ ಕಾರ್ಯದಲ್ಲಿ ಭಾರತ್ ಟಿ.ವಿ, ಸ್ವೇಧ, ಚೇಂಬರ್ ಆಫ್ ಕಾಮರ್ಸ್, ಮಾಚೇನಹಳ್ಳಿ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ತರಬೇತಿ ಕೇಂದ್ರ, ನಿರ್ಭಯ ತಂಡದವರಾದ ಚೇತನ್ ತಾರಾನಾಥ್, ಪವನ್ ಕುಮಾರ್, ಸಂದೇಶ್ ಸೂಗೂರ್ ಮಠ್ ಹಾಗೂ ಸಂಜಯ ಮೋಹನ್, ಮುಕುಂದ ಗೋಪಿನಾಥ್, ರಾಘವೇಂದ್ರ ರಾಜೇಂದ್ರ, ಮನು ಸಿದ್ದರಾಮಹಳ್ಳಿ ಮುಂತಾದ ಸ್ವತಃ ಯುವ ಪ್ರತಿಭೆಗಳು ನಮ್ಮ ಕನಸಿನ ಶಿವಮೊಗ್ಗದ ಕನಸಿಗೆ ಕೈ ಜೋಡಿಸಿದ್ದಾರೆ.
ಈ ಉದ್ದೇಶದಿಂದ ಈಗಾಗಲೇ ಈ ಅಭಿಯಾನಕ್ಕೆ ಜೊತೆಗೂಡಲು ಪ್ರತಿಭೆಗಳಿಗೆ stayatshivamogga Facebook, Twitter, YouTube ಹಾಗೂ instagram ಖಾತೆಗಳನ್ನು ತೆರೆಯಲಾಗಿದ್ದು, website ಕೂಡ ನಿರ್ಮಿಸಲಾಗಿದೆ. ಈ ಖಾತೆಗಳನ್ನು ಉಪಯೋಗಿಸಿಕೊಂಡು, ಮಾಹಿತಿ ಪಡೆದು, ತಮ್ಮ ಚಿಂತನೆ ಹಾಗೂ ಕನಸಿನ ವಿಡಿಯೋಗಳನ್ನು ಶೇರ್ ಮಾಡಲು ನಮ್ಮ ಕನಸಿನ ಶಿವಮೊಗ್ಗ ಅಧ್ಯಕ್ಷ ಗೋಪಿನಾಥ್ ಕೋರಿದ್ದಾರೆ. ಅಲ್ಲದೇ ಮಥುರಾ ರೆಸಿಡೆನ್ಸಿ ಇಲ್ಲಿ ಖುದ್ದಾಗಿಯೂ ನೋಂದಾಯಿಸಬಹುದು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಆರ್. ಗಣೇಶ್ ಇವರು ನಾಲ್ಕು ಜನಕ್ಕೆ ಉದ್ಯೋಗ ನೀಡುವ ಉದ್ಯಮಿಯಾಗಲು ಇರುವ ಸರ್ಕಾರಿ ಸೌಲಭ್ಯಗಳನ್ನು ತಿಳಿಸಿದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಡಾ. ಜಿ.ವಿ. ಹರಿಪ್ರಸಾದ್ ಹಾಗೂ ಟಿವಿ ಭಾರತ್’ನ ಹಾಲಸ್ವಾಮಿ ಅವರು ಯುವಕರನ್ನು ಜಿಲ್ಲೆಗೆ ಜೋಡಿಸುವ ವೇದಿಕೆಯ ಕಾರ್ಯ, ಅಗತ್ಯ ನಾಯಕತ್ವ ಮತ್ತು ಸಾಫ್ಟ್ ಸ್ಕಿಲ್ ತರಬೇತಿಯನ್ನು ನೀಡುವುದಾಗಿ ತಿಳಿಸಿದರು
ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ ಅವರು ಉದ್ಯೋಗ ಮತ್ತು ಉದ್ಯಮಿಯಾಗಲು ಎಲ್ಲಾ ರೀತಿಯ ಬೌತಿಕ, ಬೌದ್ಧಿಕ, ಆರ್ಥಿಕ ಸಹಕಾರವನ್ನು ಚೇಂಬರ್ ಆಫ್ ಕಾಮರ್ಸ್ ನೀಡುತ್ತದೆ ಎಂದು ತಿಳಿಸಿದರು.
ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ.ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್ ಅವರು ಯಾವುದೇ ಕೌಶಲ ಕ್ಷೇತ್ರದಲ್ಲಿ ತರಬೇತಿದಾರರಿಂದ ತರಬೇತಿಯನ್ನು ನೀಡುತ್ತೇವೆ ಎಂದು ತಿಳಿಸಿದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಹಾಗೂ KASSIA ಪರಿಷತ್ ಸದಸ್ಯರಾದ ಎಂ.ಎ. ರಮೇಶ ಹೆಗ್ಡೆ ಇವರು ಉದ್ಯೋಗಾವಕಾಶ ಕಲ್ಪಿಸುವುದಾಗಿಯೂ, ಉದ್ಯೋಗಕ್ಕೆ ಅಗತ್ಯ ಕೌಶಲ ಕಲಿಸಿಯೂ ಉದ್ಯೋಗಕ್ಕೆ ತೆಗೆದುಕೊಳ್ಳುವುದಾಗಿಯೂ ತಿಳಿಸಿದರು.
ನಿರ್ಭಯ ತಂಡದ ಚೇತನ್ ತಾರಾನಾಥ್ ಕಡೆಕೊಪ್ಪ, ಪವನ್ ಕುಮಾರ್ ಮತ್ತು ಸಂದೇಶ್ ಇವರು ಶಿವಮೊಗ್ಗ ಯುವ ಪ್ರತಿಭೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶ, ಅಗತ್ಯ ಮತ್ತು ಭವಿಷ್ಯದ ಕೌಶಲಗಳು, Artificial intelligence (Robotics), organic farming, Start Up ಆರಂಭಿಸಬಹುದಾದ ವಿವರ ತಿಳಿಸಿದರು.
ಸ್ವಯಂ ಉದ್ಯಮಿ ಗೋಪಿನಾಥ್ ಹಾಗೂ ಲಕ್ಷ್ಮಿ ಗೋಪಿನಾಥ್ ಅವರ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆಯ ಇನ್ನೊಂದು ಆಯಾಮ ಇದಾಗಿದ್ದು, ಶಿವಮೊಗ್ಗ ಪ್ರದೇಶದ ಯುವ ಉದ್ಯಮಿಗಳಿಗೆ, ಪ್ರಮುಖವಾಗಿ ಐಟಿ ಬಿಟಿ ಯುವಕರಿಗೆ ಹೊಸ ಬಾಗಿಲನ್ನು ತೆರೆದಿರುವ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ.
ನಮ್ಮ ಕನಸಿನ ಶಿವಮೊಗ್ಗದ ಕಾರ್ಯದರ್ಶಿ ಆ.ನ ವಿಜಯೇಂದ್ರ ರಾವ್, ನಿರ್ದೇಶಕಿ ನಿರ್ಮಲಾ ಕಾಶಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಆರ್. ಗಣೇಶ್, ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷ ಶಂಕರಪ್ಪ, ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ.ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್, ಯೋಜನೆಯ ಸಹಯೋಗಿಗಳಾದ ಟಿವಿ ಭಾರತ್’ನ ಹಾಲಸ್ವಾಮಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಡಾ.ಜಿ.ವಿ ಹರಿಪ್ರಸಾದ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ಹಾಗೂ KASSIA ಪರಿಷತ್ ಸದಸ್ಯರಾದ ಎಂ.ಎ. ರಮೇಶ ಹೆಗ್ಡೆ, ಹಾಗೂ ಯುವ ಪ್ರತಿಭೆ ನಿರ್ಭಯ ತಂಡದವರಾದ ಚೇತನ್ ತಾರಾನಾಥ್, ಪವನ್ ಕುಮಾರ್, ಸಂದೇಶ್ ಸೂಗೂರ್ ಮಠ್ ಹಾಗೂ ಸಂಜಯ ಮೋಹನ್, ಮುಕುಂದ ಗೋಪಿನಾಥ್, ರಾಘವೇಂದ್ರ ರಾಜೇಂದ್ರ, ಮನು ಸಿದ್ದರಾಮಹಳ್ಳಿ ಮುಂತಾದ ಸ್ವತಃ ಯುವ ಪ್ರತಿಭೆಗಳು ಮುಂತಾದವರು ಇದ್ದರು.
ವೆಬ್ಸೈಟ್. www.stayatshivamogga.com
ಸಂಪರ್ಕ ಸಂಖ್ಯೆ: 9448122646, 9448790127
Get in Touch With Us info@kalpa.news Whatsapp: 9481252093
Discussion about this post