ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದು, ಆತನಿಂದ 7.77ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಣ್ಣಾನಗರ ನಿವಾಸಿ ಸದ್ದಾಂ (31) ಬಂಧಿತ ಆರೋಪಿಯಾಗಿದ್ದು, ಈತ ಡಿ.2ರಂದು ಅಣ್ಣಾನಗರದ ಮನೆಯೊಂದರ ಎಕ್ಸಾಸ್ಟ್ ಫ್ಯಾನ್ ಮುರಿದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ನಗದು, ಟಿ, ಮೊಬೈ ಮತ್ತು ವಾಚನ್ನು ಕಳವು ಮಾಡಿದ್ದನು ಎನ್ನಲಾಗಿದೆ.
ಪ್ರಕಣದ ತನಿಖೆ ಕೈಗೊಂಡ ದೊಡ್ಡಪೇಟೆ ಠಾಣೆ ಇನ್ಸ್‌ಪೆಕರ್ ಅಚಿಜನ್ ಕುಮಾರ್ ಅವರನ್ನೊಳಗೊಂಡ ತಂಡ ಆರೋಪಿ ಸದ್ದಾಂನನ್ನು ಬಂಧಿಸುವಲ್ಲಿ ಯಾಶಸ್ವಿಯಾಗಿದೆ. ಈತನಿಂದ 8 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 144.50ಗ್ರಾಂ ಚಿನ್ನಾಭರಣ, 310 ಗ್ರಾಂ ಬೆಳ್ಳಿ ವಸ್ತುಗಳು, ಒಂದು ಮೊಬೈಲ್, ಒಂದು ವಾಚ್ ಹಾಗೂ ಎರಡು ಟಿವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ವೇಳೆ ಪಿಎಸ್‌ಐಗಳಾದ ವಸಂತ್, ಮಂಜಮ್ಮ, ಪ್ರೊಬೇಷನರಿ ಪಿಎಸ್‌ಐಗಳಾದ ಕೃಷ್ಣಕುಮಾರ್ ಮಾನೆ, ಸೈಲ್ ಕೆಂಚಣ್ಣನವರ್, ಎಎಸ್‌ಐಗಳಾದ ಚಂದ್ರಶೇಖರ್, ಎಸ್.ಸಿ. ಪಾಲಾಕ್ಷನಾಯ್ಕ್, ಗುರುನಾಯ್ಕ್, ಸಿ. ಶಶಿಧರ, ಚಂದ್ರಾನಾಯ್ಕ, ಮನೋಹರ್, ನಿತಿನ್, ರಮೇಶ್ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post