ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿ ತಾಲೂಕಿನ ತಿಪ್ಲಾಪುರ ಗ್ರಾಮದಲ್ಲಿ ನಾಲೈದು ದಿನಗಳ ಹಿಂದೆ ಕೊಟ್ಟ ಸಾಲ ವಾಪಸ್ ಕೊಡು ಎಂದು ಕೇಳಲು ಹೋದ ಸ್ನೇಹಿತನಿಗೆ ಆತನ ಮನೆಯವರೆಲ್ಲ ಸೇರಿ ಹೊಡೆದಿದ್ದಾರೆ.
ಅನಿಷ್ ಎಂಬಾತ ತನ್ನ ಸ್ನೇಹಿತನಾದ ಅಲಿ ಎಂಬಾತನಿಗೆ ಕೆಲವು ದಿನಗಳ ಹಿಂದೆ 40 ಸಾವಿರ ರೂ. ಸಾಲ ನೀಡಿದ್ದ. ಹಣ ಪಡೆದು ಹಲವು ದಿನಗಳೇ ಕಳೆದರೂ ಆತ ವಾಪಸು ಮಾಡಿರಲಿಲ್ಲ. ಇದರಿಂದ ಬೇಸತ್ತ ಅನಿಷ್ ತನ್ನ ಮಾವನನ್ನು ಕರೆದುಕೊಂಡು ಅಲಿಯ ಮನೆಗೆ ಹೋಗಿಹಣ ಕೊಡು ಎಂದು ಒತ್ತಾಯಿಸಿದ್ದಾನೆ.

ಹೊಡೆದ ತಿಂದ ಅನಿಷ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಲಿ ವಿರುದ್ಧ ದೂರು ನೀಡಿದ್ದರೆ, ಅಲಿ ಮನೆಯವರೂ ಪ್ರತಿದೂರು ದಾಖಲಿಸಿದ್ದಾರೆ.

ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರಿನಲ್ಲಿ ಭಾನುವಾರ ವಿದ್ಯುತ್ ಅವಘಡದಿಂದ ರೈತನೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಪ್ರವಹಿಸಿರುವ ಕಾರಣ ರೈತ ಹಿರಿಯಣ್ಣ (58) ಮೃತಪಟ್ಟಿದ್ದಾರೆ. ಹಿರಿಯಣ್ಣ ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದರು. ಇವರ ಪತ್ನಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಮೂವರು ಪುತ್ರಿಯರಿದ್ದಾರೆ. ಸದಸ್ಯರಾಗಿದ್ದಾರೆ.
ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.











Discussion about this post