ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿಕಾರಿಪುರ: ಕುರುಬರು ಕಾಲು ಕೆರೆದು ಹುಡ್ಡಿ ಹೊಡೆದು ನಿಲ್ಲಬೇಕು. ನಾವು ನಮ್ಮ ಬಲ ತೊರಿಸದೇ ಇದ್ದರೆ ಎಂದಿಗೂ ಸೌಲಭ್ಯ ಸಿಗುವುದಿಲ್ಲ ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಕುರುಬರ ಎಸ್’ಟಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಇಚ್ಛಾಶಕ್ತಿಯ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಹಿಂದುಳಿದಿದೆ. ಕರ್ನಾಟಕದಲ್ಲಿ ಕಲಬುರಗಿ, ಯಾದಗಿರಿ, ರಾಯಚೂರು ಬುಡಕಟ್ಟು ಸಮುದಾಯದ ಕುರುಬರನ್ನು ಕೇಂದ್ರ ಸರ್ಕಾರ ಕರೆದು ಮಾತನಾಡುತ್ತಿದೆ ಎಂದರೇ ಅದು ಕುರುಬ ಎಸ್’ಟಿ ಮೀಸಲಾತಿ ಹೋರಾಟ ಸರ್ಕಾರಗಳನ್ನು ಎಚ್ಚರಿಸುತ್ತಿದೆ ಎಂದರು.
ಕಾಡು ಮೇಡು, ನದಿಗಳ ದಡದಲ್ಲಿ ಶೇ.40ರಷ್ಟು ಕುರುಬರು ಇಂದಿಗೂ ವಾಸವಿದ್ದಾರೆ. ಫೀಸ್ ಕಟ್ಟಲು ಆಗದೇ ವಿದ್ಯಾಭ್ಯಾಸ ನಡೆಸದೇ ಇರುವವರು ಇದ್ದಾರೆ. ಅವರಿಗೆಲ್ಲ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ. ಉದ್ಯೋಗದಲ್ಲಿ ಸಾಕಷ್ಟು ನೌಕರಿ ಸಿಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದರು.
ಹುಡ್ಡಿ ಹೊಡೆದರೆ ಮಾತ್ರ ನಾವು ಈ ಹೋರಾಟದಲ್ಲಿ ಗೆಲ್ಲುತ್ತೇವೆ. ಈ ಹೋರಾಟ ಯಾವ ವ್ಯಕ್ತಿ ಪರನೂ ಅಲ್ಲ ವಿರೋಧವೂ ಅಲ್ಲ. ಸಮಾಜ ಕಟ್ಟಕಡೆಯ ವ್ಯಕ್ತಿಗಳಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post