ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕ್ಯಾನ್ಸರ್ ಕಾಯಿಲೆಗೆ ಅಮೆರಿಕಾದಲ್ಲಿ ಯಶಸ್ವಿ ಆಪರೇಶನ್ #Surgery ಬಳಿಕ ಬೆಂಗಳೂರಿಗೆ ಮರಳಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರುಗಳು ರಾಜ್ಯದ ಜನತೆ ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ವೇಳೆ ಮಾತನಾಡಿದ ಗೀತಾ ಶಿವರಾಜಕುಮಾರ್, #GeethaShivarajkumar ಅಮೆರಿಕಾದಲ್ಲಿ ಅಲ್ಲಿನ ವೈದ್ಯರ ತಂಡ ಅತ್ಯುತ್ತಮ ಚಿಕಿತ್ಸೆ ನೀಡಿ ಇವರನ್ನು ಗುಣಮುಖರನ್ನಾಗಿ ಮಾಡಿದ್ದಾರೆ ಎಂದರು.
Also Read>> ಐ ಆಮ್ ಬ್ಲೆಸ್ಡ್ ಬೈ ಬೆಸ್ಟ್ ಫ್ಯಾನ್ಸ್ | ಯಶಸ್ವಿ ಸರ್ಜರಿ ಬಳಿಕ ತವರಿಗೆ ಮರಳಿದ ಶಿವಣ್ಣ ಫಸ್ಟ್ ರಿಯಾಕ್ಷನ್
ಅಮೆರಿಕಾದಲ್ಲಿ #America ಇವರಿಗೆ ಆಪರೇಶನ್ ಮಾಡಿದ್ದ ನಮ್ಮ ಬೇಲೂರು ಮೂಲದ ಮನು ಎಂಬ ವೈದ್ಯರು. ಅವರ ಶ್ರಮ, ಸಹಕಾರ ಹಾಗೂ ಮಾರ್ಗದರ್ಶನ ದೊಡ್ಡರು. ನಮಗಾಗಿ ಅವರೂ ಸಹ ಪ್ರಾರ್ಥನೆ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.

ಆಪರೇಶನ್ ಆದ 2-3 ಲಿಕ್ವಿಡ್ ಕೇವಲ ಲಿಕ್ವಿಡ್ ಆಹಾರ ತೆಗೆದುಕೊಂಡು ಆನಂತರ ತಿಳಿ ಸಾರು ಹಾಗೂ ಅನ್ನ ಮಾತ್ರ ಸೇರಿಸುತ್ತಿದ್ದೆ. ಆಹಾರ ತೀರಾ ಕಡಿಮೆಯಿದ್ದರೂ, ದೇಹ ಹಾಗೂ ಮನಸ್ಸಿನಲ್ಲಿ ಶಕ್ತಿ ಹೆಚ್ಚಾಗಿತ್ತು. ಅಲ್ಲಿಯೇ ಅಡುಗೆ ಮನೆ ಸೆಟ್ ಮಾಡಿಕೊಂಡು ಗೀತಾ ಅಡುಗೆ ಮಾಡುತ್ತಿದ್ದರು ಎಂದರು.
ಸರ್ಜರಿ ಆದ ಎರಡು ದಿನ, ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ. ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. 131 ಸಿನಿಮಾ ಬಗ್ಗೆ ಪ್ಲ್ಯಾನ್ ಇದೆ. ರಾಮ್ ಚರಣ್ ಅವರ ಸಿನಿಮಾ ಮಾಡುತ್ತೇನೆ ಎಂದರು.
ಅಮೆರಿಕಾಗೆ ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಅಮೆರಿಕಾಗೆ 20-22 ಗಂಟೆ ವಿಮಾನ ಪ್ರಯಾಣ ಆಯಿತು. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದರು.

ಅಲ್ಲಿನ ವೈದ್ಯರು ಪ್ರತಿ ಹಂತದಲ್ಲೂ ಸಹ ನನಗೆ ಸಹಾಯ ಮಾಡಿ, ಧೈರ್ಯ ತುಂಬಿದ್ದಾರೆ. ಅಲ್ಲಿನ ತಂಡಕ್ಕೆ ಧನ್ಯವಾದಗಳು ಎಂದರು.
ಯಾವಾಗಿನಿಂದ ಶೂಟಿಂಗ್ ಆರಂಭ
ವೈದ್ಯರ ಬಳಿ ಮಾತನಾಡಿದ್ದೇವೆ. ವಿಶ್ರಾಂತಿ ಹೇಳಿದ್ದರೂ, ನಾರ್ಮಲ್ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ವೈದ್ಯರನ್ನು ಕೇಳಿ ಆನಂತರ ಅಂದರೆ ಮಾರ್ಚ್ ಬಳಿಕ ಆಕ್ಷನ್ ವರ್ಕ್ ಆರಂಭಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post