ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು 32 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಭದ್ರಾವತಿ ನಗರಸಭೆ ವ್ಯಾಪ್ತಿ:
ಎನ್’ಎಸ್’ಟಿ ರಸ್ತೆಯ 36 ವರ್ಷದ ಮಹಿಳೆ, ಜನ್ನಾಪುರದ ಎಸ್’ಜೆ ರಸ್ತೆಯ 58 ವರ್ಷದ ಪುರುಷ ಹಾಗೂ 33 ವರ್ಷದ ಪುರುಷ, ತರೀಕೆರೆ ರಸ್ತೆಯ 59 ವರ್ಷದ ಪುರುಷ, ಹೊಸಮನೆ ತಮ್ಮಣ್ಣ ಕಾಲೋನಿಯ 48 ವರ್ಷದ ಪುರುಷ, ಕಡದಕಟ್ಟೆಯ ಒಂದೇ ಕುಟುಂಬದ 43 ವರ್ಷದ ಪುರುಷ, 10 ವರ್ಷದ ಬಾಲಕ ಹಾಗೂ 12 ವರ್ಷದ ಬಾಲಕಿ, ಸಿದ್ದೇಶ್ವರ ನಗರದ 40 ವರ್ಷದ ಪುರುಷ, ದೇವರಹಳ್ಳಿ 48 ವರ್ಷದ ಪುರುಷ, ವಿಶ್ವೇಶ್ವರ ನಗರದ 72 ವರ್ಷದ ವೃದ್ಧ, ಭೂತನಗುಡಿಯ 14 ವರ್ಷದ ಬಾಲಕ ಹಾಗೂ 32 ವರ್ಷದ ಪುರುಷ, ಆಂಜನೇಯನ ಅಗ್ರಹಾರದ 39 ವರ್ಷದ ಪುರುಷ, ಉಜ್ಜಿನೀಪುರದ 22 ವರ್ಷದ ಯುವಕ, ಜನ್ನಾಪುರದ 63 ವರ್ಷದ ವೃದ್ಧ, ತರೀಕೆರೆ ರಸ್ತೆಯ ಅರಣ್ಯ ಇಲಾಖೆ ವಸತಿ ಗೃಹದ ಬಳಿ 29 ವರ್ಷದ ಪುರುಷ, ಹುತ್ತಾ ಕಾಲೋನಿಯ 59 ವರ್ಷದ ಪುರುಷ, ಕೂಲಿಬ್ಲಾಕ್ ಶೆಡ್ 19 ವರ್ಷದ ಯುವಕ, ಕಾಚೆಗೊಂಡನಹಳ್ಳಿಯ 45 ವರ್ಷದ ಮಹಿಳೆ.

ಹೊಳೆಹೊನ್ನೂರು ವ್ಯಾಪ್ತಿ:
ಅಂಬೇಡ್ಕರ್ ನಗರದ 21 ವರ್ಷದ ಯುವಕ, 31 ವರ್ಷದ ಪುರುಷ, 50 ವರ್ಷದ ಮಹಿಳೆ, 26 ವರ್ಷದ ಮಹಿಳೆ, 29 ವರ್ಷದ ಮಹಿಳೆ, ಹೊಸಕೊಪ್ಪ ಗ್ರಾಮ 33 ವರ್ಷದ ಮಹಿಳೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಕೋವಿಡ್19 ಬುಲೆಟಿನ್ ಪ್ರಕಾರ ಭದ್ರಾವತಿ ತಾಲೂಕಿನಲ್ಲಿಂದು 32 ಪ್ರಕರಣಗಳು ಪತ್ತೆಯಾಗಿವೆ. ಆದರೆ, ಮಾಧ್ಯಮಗಳಿಗೆ ದೊರೆತಿರುವ ವಿವರಗಳು 26 ಪ್ರಕರಣಗಳದ್ದು ಮಾತ್ರ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093















