ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರುವ ಹಂತದಲ್ಲಿ ಕಾಂಗ್ರೆಸ್ ನಲ್ಲಿ ಉಂಟಾಗಿದ್ದ ಗೊಂದಲ ಪರಿಹಾರವಾಗಿದ್ದು ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಪಟ್ಟು ಹಿಡಿದಿದ್ದು ಈ ವಿಚಾರ ಪಕ್ಷದ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ನಿನ್ನೆ ತಡರಾತ್ರಿ ಸೋನಿಯ ಗಾಂಧಿ ಮಧ್ಯ ಪ್ರವೇಶ ಮಾಡಿ ಮಾತುಕತೆ ನಡೆಸಿದ್ದು, ಸಂಧಾನ ಯಶಸ್ವಿ ಆಗಿದೆ.

ಮೊದಲ 2.5 ವರ್ಷ ಸಿದ್ಧರಾಮಯ್ಯ ಹಾಗೂ ನಂತರದ 2.5 ವರ್ಷ ಡಿಕೆಶಿ ಸಿಎಂ ಆಗಿ ಅಧಿಕಾರ ನಡೆಸಬೇಕು ಎಂಬ ಸೋನಿಯ ಮಾತಿದೆ ಇಬ್ಬರು ನಾಯಕರು ಒಪ್ಪಿದ್ದಾರೆ. ಹೀಗಾಗಿ ಉಲ್ಬಣಗೊಂಡಿದ್ದ ಬಿಕ್ಕಟ್ಟು ಶಮನವಾಗಿದ್ದು, ಕಾಂಗ್ರೆಸ್ ಪಾಲಯದಲ್ಲಿ ಸಂತಸ ಮನೆ ಮಾಡಿದೆ.

ಇಂದು ಈ ನಿರ್ಧಾರ ಅಧಿಕೃತ ಘೋಷಣೆ ಆಗಲಿದ್ದು, ಮೇ 20 ರಂದು ಪ್ರಮಾಣ ವಚನ ಸ್ವೀಕಾರ ಆಗಲಿದೆ ಎನ್ನಲಾಗಿದೆ. ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

















