ಕಲ್ಪ ಮೀಡಿಯಾ ಹೌಸ್ | ಶಿರಸಿ |
ಇಲ್ಲಿನ ಮಾರಿಕಾಂಬಾ ದೇವಾಲಯಕ್ಕೆ #Sirsi Marikamba Temple ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ #Geetha Shivarajkumar ಅವರು ಪತಿ ಶಿವರಾಜಕುಮಾರ ಅವರೊಂದಿಗೆ ಮಂಗಳವಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವರಾಜಕುಮಾರ ಅವರು, ಪ್ರತಿ ವರ್ಷ ಶಿರಸಿಗೆ ಬಂದಾಗಲೆಲ್ಲಾ ದೇವಿಯ ಆಶೀರ್ವಾದ ಪಡೆಯುತ್ತೇವೆ. ರಾಜ್ಯದಲ್ಲಿ ಮುಂಜಾನೆಯಿಂದ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ, ಇಲ್ಲಿ ಬಿಸಿಲಿನ ತಾಪಮಾನ ಕೂಡ ಹೆಚ್ಚಿದೆ. ಆದ್ದರಿಂದ ಮಧ್ಯಾಹ್ನದೊಳಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಂದೇಶ ನೀಡಿದರು.

Also read: ಲೋಕಸಭೆ ಚುನಾವಣೆ: ಗಮನ ಸೆಳೆದ ಅರಮನೆ ಮಾದರಿ ಮತಗಟ್ಟೆ | ಹಲವು ಮುಖಂಡರಿಂದ ಹಕ್ಕು ಚಲಾವಣೆ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ತಾಯಿಯ ದರ್ಶನ ಪಡೆದಿರುವುದು ಸಂತಸ ತಂದಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೆಲ್ಲುವ ಎಲ್ಲಾ ರೀತಿಯ ಸಕಾರಾತ್ಮಕ ವಾತಾವರಣ ಕಾಣುತ್ತಿದೆ. ಮುಂದಿನದು ದೇವರು ಹಾಗೂ ಜನರ ಅಭಿಪ್ರಾಯಕ್ಕೆ ಬಿಡಲಾಗಿದೆ ಎಂದರು.
ಶಿರಸಿಯ ಶಾಸಕ ಭೀಮಣ್ಣ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ, ಅಬ್ಬಾಸ್ ತೋಂಸೆ ಸೇರಿ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post