No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Saturday, September 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಲೋಕಸಭೆ ಚುನಾವಣೆ: ಗಮನ ಸೆಳೆದ ಅರಮನೆ ಮಾದರಿ ಮತಗಟ್ಟೆ | ಹಲವು ಮುಖಂಡರಿಂದ ಹಕ್ಕು ಚಲಾವಣೆ

kalpa News by kalpa News
May 7, 2024
in ಶಿವಮೊಗ್ಗ
0
ಲೋಕಸಭೆ ಚುನಾವಣೆ: ಗಮನ ಸೆಳೆದ ಅರಮನೆ ಮಾದರಿ ಮತಗಟ್ಟೆ | ಹಲವು ಮುಖಂಡರಿಂದ ಹಕ್ಕು ಚಲಾವಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಇಂದು ಮತದಾನ ಪ್ರಕ್ರಿಯೆ ಕೆಲವು ಸಣ್ಣಪುಟ್ಟ ಲೋಪದೋಷ ಬಿಟ್ಟರೆ ಅತ್ಯಂತ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿದೆ.

ಸುಮಾರು 3 ಗಂಟೆಯ ವೇಳೆಗೆ ಸರಾಸರಿ ಶೇ. 50 ರಷ್ಟು ಮತದಾನವಾಗಿತ್ತು. ಬೆಳಗ್ಗಿನಿಂದಲೇ ಎಲ್ಲಾ ಬೂತ್‍ಗಳಲ್ಲೂ ಜನರು ಸರತಿಯ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಬಿಸಿಲಿನ ಬೇಗೆ ಇರುವುದರಿಂದ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯೊಳಗೆ ಶೇ.30ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.45ರಷ್ಟು ಮತದಾನ ನಡೆದಿತ್ತು. ಸಂಜೆಯ ವೇಳೆಗೆ ಶೇ.75ರಷ್ಟು ಮತದಾನವಾಗುವ ನಿರೀಕ್ಷೆ ಇದೆ.
ಬೈಂದೂರು, ತೀರ್ಥಹಳ್ಳಿ, ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿವಮೊಗ್ಗ ಗ್ರಾಮಾಂತರ ಸೊರಬ ಮುಂತಾದ ಕಡೆಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಶೇ. 45ರಷ್ಟು ಮತದಾನವಾಗಿತ್ತು.  ಕೆಲವು ಕಡೆ ಸರತಿಯ ಸಾಲು ಉದ್ದವಿದ್ದರೆ ಮತ್ತೆ ಕೆಲವು ಕಡೆ ಸಾಧಾರಣವಾಗಿತ್ತು. ಬಹುತೇಕ ಎಲ್ಲಾ ಬೂತ್‍ಗಳಲ್ಲಿಯೂ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಮತದಾನ ನಡೆಯುವ ಸ್ಥಳದಿಂದ 100 ಮೀ. ದೂರದಲ್ಲಿ ಎಲ್ಲಾ ಪಕ್ಷಗಳು ಮತದಾನ ಚೀಟಿ ಬರೆಯಲು ಕುಳಿತಿರುವ ದೃಶ್ಯ ಕಂಡು ಬಂದಿತ್ತು. ಆಯಾ ವ್ಯಾಪ್ತಿಯ ಮುಖಂಡರು ಮತದಾನ ಮಾಡಲು ಬರುವವರೆಗೆ ತಮ್ಮ ತಮ್ಮ ಪಕ್ಷಗಳಲ್ಲಿ ಬರುವವರೆಗೆ ಕೊನೆಯ ಬಾರಿ ಮತಹಾಕುವಂತೆ ಮನವಿ ಮಾಡುತ್ತಿರುವ ದೃಶ್ಯ ಕೂಡ ಸಾಮಾನ್ಯವಾಗಿತ್ತು.

ಆಯಾ ಪಕ್ಷದ ಕಾರ್ಯಕರ್ತರು, ಮುಖಂಡರು, ಪಕ್ಷದ ಚಿಹ್ನೆಯ ಗುರುತನ್ನು ಧರಿಸಿಕೊಂಡು ಸಂಭ್ರಮದಿಂದ ಓಡಾಡುತ್ತಿರುವ ದೃಶ್ಯಗಳು ಕಂಡುಬಂದವು. ಮತಹಾಕಲು ಇನ್ನೂ ಯಾರೂ ಬಂದಿಲ್ಲ ಎಂದು ಕೊಂಡು ತಮ್ಮ ಪರಿಚಯದವರನ್ನು ಪೋನ್‍ಮೂಲಕ ಕರೆಸಿಕೊಳ್ಳುತ್ತಿದ್ದರು.
ಕೆಲವು ಕಡೆ ಎವಿಎಂ ಮಿಷನ್ ಕೈಕೊಟ್ಟ ಘಟನೆಗಳು ನಡೆದವು. ಇದರಿಂದಾಗಿ ಮತದಾನ ಪ್ರಕ್ರಿಯೆ ಕೆಲವು ಕಾಲ ಮುಂದಕ್ಕೆ ಹೋಗಿತ್ತು. ಮತ್ತೆ ಕೆಲವು ಕಡೆ ಕಾರ್ಯಕರ್ತರ ಮಧ್ಯೆ ಸಣ್ಣಪುಟ್ಟ ವಾಗ್ವಾದಗಳು ಕೂಡ ನಡೆದವು. ಬಾಪೂಜೆ ನಗರದಲ್ಲಿ ಪೊಲೀಸರೊಂದಿಗೆ ಚಕಮಕಿ ನಡೆದ ಘಟನೆ ಕೂಡ ನಡೆದಿದೆ.

ಕೆಲವು ಬೂತ್‍ಗಳಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಮಹಿಳೆಯರಿಗಾಗಿಯೇ ಸಖಿ ಬೂತ್‍ನ್ನು ನಿರ್ಮಾಣ ಮಾಡಲಾಗಿತ್ತು. ಜಿ.ಪಂ.ನಲ್ಲಿ  ಅರಮನೆಯಂತೆ ಶೃಂಗಾರಗೊಂಡ ಮತದಾನ ಕೇಂದ್ರದಲ್ಲಿ ಮತಹಾಕಿ ಬಂದು ರಾಜನ ರೀತಿಯ ಕಿರೀಟ ಧರಿಸಿ ಸಂಭ್ರಮಿಸಿದರು. ರವೀಂದ್ರನಗರದ ಸಖಿ ಮತಗಟ್ಟೆ ಪಿಂಕ್ ಬಣ್ಣದಲ್ಲಿ ಗಮನಸೆಳೆಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬೆಳಲಮಕ್ಕಿ ಮತಗಟ್ಟೆ ಸಂಖ್ಯೆ 76 ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರ ಮನಸೆಳೆಯಿತು.
ಜಿಲ್ಲಾ ಪಂಚಾಯತ್ ಆವರಣದಲ್ಲಿನ ಮತಗಟ್ಟೆ ಅರಮನೆಯ ಗತವೈಭವವನ್ನು ಸಾರಿದಂತೆ ರೂಪಗೊಂಡಿತ್ತು. 283ರ ಈ ಮತಗಟ್ಟೆ ಪ್ರಜಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಈ ಉದ್ದೇಶದಿಂದಲೇ ಈ ಮತಗಟ್ಟೆ ಸಿದ್ಧವಾಗಿದೆ ಎಂದು ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.

ವಯಸ್ಸಾದವರಿಗಾಗಿಯೇ ಈ ಬಾರಿ ವ್ಹೀಲ್ ಚೇರ್‍ಗಳನ್ನು ಬಹುತೇಕ ಎಲ್ಲಾ ಮತಕೇಂದ್ರಗಳಲ್ಲೂ ಇಡಲಾಗಿತ್ತು. ಹಿರಿಯರು, ಅಂಗವಿಕಲರು ಇದರ ಸೌಲಭ್ಯ ಪಡೆದು ಮತಚಲಾಯಿಸಿದರು.
ಅಬ್ಬಲಗೆರೆಯ 98 ವರ್ಷದ ಶಿವಗಂಗಮ್ಮ, ಶಿಕಾರಿಪುರದ ಈಸೂರಿನಲ್ಲಿ 94 ವರ್ಷದ ಶಿವಾಚಾರ್, 78 ವರ್ಷದ ಈರಮ್ಮ ಸರತಿಯ ಸಾಲಿನಲ್ಲಿ ಬಂದು ಮತಚಲಾಯಿಸಿದರು. 70ಕ್ಕೂ ಹೆಚ್ಚು ವರ್ಷ ವಯಸ್ಸಿನ ಅನೇಕರು ಯಾರ ಸಹಾಯವು ಇಲ್ಲದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಯುವ ಮತದಾರರು ಕೂಡ ಈ ಬಾರಿ ಅತ್ಯಂತ ಸಂಭ್ರಮದಿಂದ ಮತದಾನ ಮಾಡಿದರು. ಎಂಬಿಎ ವಿದ್ಯಾರ್ಥಿ ಸಂಜನ ಮತದಾನ ಮಾಡಿ ಮೊದಲ ಸಾರಿ ಮತದಾನ ಮಾಡಿ ನಮ್ಮ ದೇಶ ನಮ್ಮ ಹಕ್ಕು  ಎಂಬ ಅಡಿಯಲ್ಲಿ ಪ್ರತಿಯೊಬ್ಬರ ಮತದಾನ ಮಾಡಬೇಕು ಎಂದರು.

ಬಿ.ಎಸ್.ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮಧುಬಂಗಾರಪ್ಪ, ಕುಮಾರಬಂಗಾರಪ್ಪ, ಡಿ.ಹೆಚ್.ಶಂಕರಮೂರ್ತಿ, ಹರತಾಳ್ ಹಾಲಪ್ಪ, ಬೇಲೂರು ಗೋಪಾಲಕೃಷ್ಣ, ಎಸ್.ಎನ್. ಚನ್ನಬಸಪ್ಪ, ಕೆ.ಎಸ್.ಈಶ್ವರಪ್ಪ, ಡಿ.ಎಸ್.ಅರುಣ್, ಭಾನುಪ್ರಕಾಶ್, ಹೆಚ್.ಸಿ.ಯೋಗೀಶ್, ಹೆಚ್.ಎಸ್.ಸುಂದರೇಶ್, ಎಸ್. ರುದ್ರೇಗೌಡ, ಎಂ.ಶ್ರೀಕಾಂತ್, ಶಾರದಪೂರ್ಯನಾಯ್ಕ, ಆರ್.ಎಂ.ಮಂಜುನಾಥ್ ಗೌಡ, ಆಯನೂರು ಮಂಜುನಾಥ್, ಎಸ್.ದತ್ತಾತ್ರಿ, ಗಿರೀಶ್, ಆರ್.ಕೆ.ಸಿದ್ರಾಮಣ್ಣಾ, ವೈ.ಹೆಚ್.ನಾಗರಾಜ್ ಸೇರಿದಂತೆ ಅನೇಕೆ ರಾಜಕೀಯ ಮುಖಂಡರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕುಟುಂಬದೊಂದಿಗೆ ಮತಚಲಾಯಿಸಿದರು.
ಶುಭಂ ಹೋಟೆಲ್‍ನಲ್ಲಿ ಬೆಳಗ್ಗೆ 7 ಗಂಟೆಯಿಂದ 1 ಗಂಟೆಯವರೆಗೆ ಮತದಾನ ಮಾಡಿ ಬಂದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಾಲ್ಗುಡಿ ಹೋಟೆಲ್‍ನಲ್ಲಿ ಟೀ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಕಡೆ ಮತದಾನ ಮಾಡಿ ಬಂದವರಿಗೆ ಸಸಿಗಳನ್ನು ನೀಡಲಾಯಿತ್ತು.

Also read: ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಕಾದಿದೆ ಮುಂದೆ ಆಘಾತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

ಅಮೇರಿಕ, ಅಸ್ಟ್ರೇಲಿಯಾ, ಕತ್ತಾರ್ ಮುಂತಾದ ಹೊರದೇಶಗಳಿಂದಲೂ ಕೂಡ ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು ವಿಶೇಷವಾಗಿತ್ತು. ಕೆಲವು ಕಡೆ ಮತದಾನ ಮಾಡುವವರಿಗೆ ಹೋಗಲು ಬಸ್‍ಗಳ ತೊಂದರೆಕೂಡ ಆಗಿದ್ದು ಗಮನಕ್ಕೆ ಬಂದಿತ್ತು.

ಈ ಬಾರಿ ಜಿಲ್ಲಾ ಹಾಗೂ ಮಹಾನಗರಪಾಲಿಕೆಯ ಆಡಳಿತದ ಸ್ವೀಪ್ ತಂಡ ಜಾಗೃತಿಯನ್ನು ಮೂಡಿಸಿತ್ತು. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಹಾಗೂ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಪಾಲಿಕೆ ಆಯುಕ್ತ ಮಾಯಣ್ಣಗೌಡ ವಿಶೇಷ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದು ಎದ್ದುಕಾಣುತ್ತಿದೆ.
ಒಟ್ಟಾರೆ ಕಳೆದ 40 ದಿನಗಳಿಂದ ಸುಡು ಬಿಸಿಲಿನಲ್ಲೂ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಸ್ಪರ್ಧಿಗಳು ಸೇರಿದಂತೆ ಕಾರ್ಯಕರ್ತರು ಹೈರಾಣಾಗಿ ಹೋಗಿದ್ದರು. ಚುನಾವಣೆ ಮುಗಿದರೆ ಸಾಕಪ್ಪ ಎಂದುಕೊಂಡಿದ್ದರು. ಈ ಎಲ್ಲಾ ಬಿಸಿಲು, ಅಭ್ಯರ್ಥಿಗಳ ತಲ್ಲಣ, ಚುನಾವಣೆಯ ತವಕಗಳ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಅತ್ಯಂತ ಶಾಂತಿಯುತವಾಗಿಯೇ ನಡೆದಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/05/Kumadwathi-1.mp4
https://kalpa.news/wp-content/uploads/2024/04/VID-20240426-WA0008.mp4
https://kalpa.news/wp-content/uploads/2024/04/VID-20240419-WA0018.mp4

                                               

Tags: Kannada NewsKannada News LiveKannada News Online ShivamoggaKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamogga Newsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಕಾದಿದೆ ಮುಂದೆ ಆಘಾತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

Next Post

ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ಗೀತಾ ಶಿವರಾಜಕುಮಾರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

kalpa News

kalpa News

Next Post
ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ಗೀತಾ ಶಿವರಾಜಕುಮಾರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ಗೀತಾ ಶಿವರಾಜಕುಮಾರ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL