ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯ 404 ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಫೆ.24 ರ ಬೆ.10 ಕ್ಕೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ನೆರವೇರಿಸಲಿದ್ದಾರೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಟ್ಯಾಂಕ್ ಮೊಹಲ್ಲಾದಲ್ಲಿ 45 ಲಕ್ಷ ರೂ. ಅಂದಾಜಿನಲ್ಲಿ ಅಭಿವೃದ್ಧಿಪಡಿಸಿದ ಉದ್ಯಾನವನದ ಉದ್ಘಾಟನೆ ಮತ್ತು ಒಟ್ಟಾರೆ 404.26 ಕೋಟಿ ರೂ. ಅಂದಾಜಿನಲ್ಲಿ ಶಿವಮೊಗ್ಗ ನಗರದ ಪ್ರದೇಶ ಆಧಾರಿತ ಅಭಿವೃದ್ಧಿ ಅಡಿಯಲ್ಲಿ ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ, ಕನ್ಸರ್ವೆನ್ಸಿಗಳ ಅಭಿವೃದ್ಧಿ ಮತ್ತು ಉದ್ಯಾನವನಗಳ ಅಭಿವೃದ್ಧಿ ಮುಂತಾದ 19 ಪ್ಯಾಕೇಜ್ ಯೋಜನೆಗಳನ್ನು ಪ್ರಾರಂಭಿಸಲು ಶಂಕುಸ್ಥಾಪನೆ ಸಹ ಈ ಸಂದರ್ಭದಲ್ಲಿ ನಡೆಯಲಿದೆ.
ನಗರದ ಜೈಲ್ ರಸ್ತೆ, ಕುವೆಂಪು ರಸ್ತೆ, ನೀರಾವರಿ ಕಾಲುವೆ ರಸ್ತೆ ಹಾಗೂ ಸಾಗರ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿಸಲು 89.50 ಕೋಟಿ, ಸವಳಂಗ ರಸ್ತೆ ಹಾಗೂ ಬಿ.ಹೆಚ್ ರಸ್ತೆಗಳ ನಡುವಿನ ರಸ್ತೆಗಳನ್ನು ಸ್ಮಾರ್ಟ್ ಆಗಿ ಅಭಿವೃದ್ಧಿಗೊಳಿಸಲು 87.20 ಕೋಟಿ, ಮಲ್ಲೇಶ್ವರ ನಗರದ ಕುಟುಂಬ ಕಲ್ಯಾಣ ಆಸ್ಪತ್ರೆಯ ಮುಂಭಾಗದ ಪಾರ್ಕ್ ಅಭಿವೃದ್ಧಿಗೆ 1.83 ಕೋಟಿ, ಕಂಟ್ರಿ ಕ್ಲಬ್ ಪಕ್ಕದ ಪಾರ್ಕ್ ಅಭಿವೃದ್ಧಿಗೆ 3.70 ಕೋಟಿ, ಮಾಸ್ತಾಂಬಿಕ ದೇವಸ್ಥಾನದ ಪಾರ್ಕ್ ಅಭಿವೃದ್ಧಿಗೆ 1.20 ಕೋಟಿ, ಕನ್ಸರ್ವೆನ್ಸಿ ಅಭಿವೃದ್ಧಿಗಾಗಿ 4.57 ಕೋಟಿ, ತುಂಗಾ ಎಡದಂಡೆ ನಾಲೆ ಅಭಿವೃದ್ಧಿಗೆ 11 ಕೋಟಿ ಮತ್ತು ಕಂಟ್ರೋಲ್ ಕಮಾಂಡ್ ಸ್ಥಾಪಿಸಲು 3.10 ಕೋಟಿ ಹಾಗೂ ಇನ್ನಿತರ ಕಾಮಗಾರಿಗಾಗಿ ಒಟ್ಟು 404 ಕೋಟಿ ರೂ. ವಿನಿಯೋಗಿಸಲಾಗುತ್ತದೆ.
(ವರದಿ: ಡಾ. ಸುಧೀಂದ್ರ)
Discussion about this post