ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೋವಾ ಚಾರಿಟಬಲ್ ಟ್ರಸ್ಟ್’ನಲ್ಲಿ ಸಾಮಾಜಿಕ ದನಿ ಮಹೇಂದ್ರಕುಮಾರ್ ರವರ ಜನುಮ ದಿನದ ಸ್ಮರಣೆ ಕಾರ್ಯಕ್ರಮವನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕ ಏರ್ಪಡಿಸಲಾಗಿತ್ತು.
ಲ್ ಇಂಡಿಯಾ ಕೌನ್ಸಿಲಿಂಗ್ ಹ್ಯುಮನ್ ರೈಟ್ಸ್ ಲಿಬರ್ಟಿಸಿ ಅಂಡ್ ಸೋಷಿಯಲ್ ಜಸ್ಟೀಸ್ ಜಿಲ್ಲಾ ಕಾರ್ಯದರ್ಶಿ ಸಿಗ್ಬದ್ ಉಲ್ಲಾ ಮಾತನಾಡಿ, ಮನುಷ್ಯ ಕುಲ ಒಂದೇ ಆಗಿದ್ದು ಮಾನವೀಯತೆಯ ತಳಹದಿಯಲ್ಲಿ ಸೌಹಾರ್ದತೆಯಿಂದ ಸಾಗಬೇಕಿದೆ ಎಂದರು.
ಮಹೇಂದ್ರಕುಮಾರ್ ಅವರು ನಮ್ಮೊಂದಿಗೆ ಇಲ್ಲದಿದ್ದರು ಅವರು ಸಾಮಾಜಿಕ ನ್ಯಾಯದಡಿಯ ಮಾತುಗಳು ಇಂದಿಗೂ ಜನಮಾನಸದಲ್ಲಿದೆ. ಯಾವುದೇ ಧರ್ಮ-ಜಾತಿಯವರೇ ಆಗಿರಲಿ ಅವರು ಸಾಂವಿಧಾನಿಕವಾದ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎಂದು ಹೇಳುತ್ತಿದ್ದರು. ಸಾಕಷ್ಟು ಜನಪರ ಭಾಷಣಗಳು ಇಂದಿಗೂ ಯೂ-ಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿದೆ ಎಂದು ಸಿಗ್ಬದ್ ಉಲ್ಲಾರವರು ವಿವರಿಸಿದರು.
ಅವರ ಜನುಮ ದಿನದ ಪ್ರಯುಕ್ತ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ನೋವಾ ಚಾರಿಟಬಲ್ ಟ್ರಸ್ಟ್’ನಲ್ಲಿರುವ ಮಾನಸಿಕವಾಗಿ ನೊಂದ 35 ಜನ ಹಿರಿಯರಿಗೆ ಹಣ್ಣು-ಬ್ರೆಡ್ ವಿತರಿಸಿ ಮಾನವೀಯ ಗುಣಗಳನ್ನು ಸಾರುವ ನಿಟ್ಟಿನಲ್ಲಿ ಇಂತಹ ಹಿರಿಯರೊಂದಿಗೆ ಅನಾಥ ಪ್ರಜ್ಞೆ ಮೂಡದಂತೆ ನಿಮ್ಮೊಂದಿಗೆ ಸಮಾಜವಿದೆ ಎಂದು ಆತ್ಮಧೈರ್ಯ ನೀಡುವ ಕೆಲಸ ಇನ್ನಷ್ಟು ಮಾಡಬೇಕಿದೆ ಎಂದು ಎಲ್ಲಾ ಜೆಸಿಗಳು ಅಭಿಪ್ರಾಯಿಸಿದರು.
ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷ ಜೆಸಿ, ಗಾರಾ. ಶ್ರೀನಿವಾಸ್, ಕಾರ್ಯದರ್ಶಿ ಜೆ.ಸಿ. ಸ್ಮಿತಾ ಮೋಹನ್, ಸಹ ಕಾರ್ಯದರ್ಶಿ, ಜೆಸಿ ಪರಮೇಶ್ವರ, ಉಪಾಧ್ಯಕ್ಷ ಜೆಸಿ ಮೋಹನ್ ಕಲ್ಪತರು, ಜೆಸಿ ದಿವ್ಯಾ ಪ್ರವೀಣ್, ಜೆಸಿ ಶೋಭಾ ಸತೀಶ್, ನಿರ್ದೇಶಕರುಗಳಾದ ಜೆಸಿ ಚಿರಂಜೀವಿ ಬಾಬು, ಚಂದ್ರಹಾಸ್ ಎನ್. ರಾಯ್ಕರ್, ಜೆಸಿ ಇಮ್ರಾನ್ ಮಲ್ನಾಡ್, ಜೆಜೆಸಿ ಕಿಶೋರ್ ಹಾಗೂ ಅಬ್ದುಲ್, ವಿನಯ್ ಸೇರಿದಂತೆ ನೋವಾ ಚಾರಿಟಬಲ್ ಟ್ರಸ್ಟ್’ನ ಜ್ಞಾನ ಪ್ರಕಾಶ್ ಅವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post