ಕಲ್ಪ ಮೀಡಿಯಾ ಹೌಸ್ | ಸೊರಬ |
ಸುಮಾರು 25 ವರ್ಷಗಳ ಕಾಲ ಶುಶ್ರೂಷಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿಗೊಳ್ಳುತ್ತಿರುವ ರಾಧಮ್ಮ ಹಾಗೂ ದ್ವಿತೀಯ ದರ್ಜೆ ಸಹಾಯಕ ಪರಶುರಾಮಪ್ಪ ಅವರಿಗೆ ಇಲಾಖೆಯ ಸಿಬ್ಬಂದಿಗಳು ಆತ್ಮೀಯವಾಗಿ ಮನದುಂಬಿ ವಿದಾಯದ ಶುಭ ಕೋರಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಧಮ್ಮ, ನಿಮ್ಮೆಲ್ಲರಿಗೂ ವಿದಾಯ ಹೇಳುವ ಸಮಯ ಬಂದಿದೆ. ಈ 25 ವರ್ಷದ ಅನುಭವದಲ್ಲಿ ಶುಶ್ರೂಷಾಧಿಕಾರಿಯಾಗಿ ಇಂದು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಇಷ್ಟೆಲ್ಲ ವರ್ಷಗಳಲ್ಲಿದ್ದ, ಇರುವ ಆಡಳಿತ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ನೀಡಿದ ಸಲಹೆ ಸಹಕಾರವನ್ನು ನೆನಪಿಸಿಕೊಂಡರು. ಎಲ್ಲ ಎಎಂಒಗಳ ಬೆಂಬಲ ಅಪಾರವಾಗಿತ್ತು ಎಂದು ಧನ್ಯವಾದ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದ್ವಿತೀಯ ದರ್ಜೆ ಸಹಾಯಕ ಪರಶುರಾಮಪ್ಪ, ನನ್ನ ಈ ಕಾರ್ಯಾವಧಿಯಲ್ಲಿ ಬಹಳಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಿದ್ದು, ಎಲ್ಲರ ಸಹಕಾರ ಅನನ್ಯವಾದುದು ಎಂದರು.
Also read: ಚಂದ್ರಗುತ್ತಿ ದೇಗುಲಕ್ಕೆ ಹರಕೆ ರೂಪದಲ್ಲಿ ಬಂದ ವಸ್ತ್ರಗಳ ಹರಾಜು: ಬಂದ ಹಣವೆಷ್ಟು ಗೊತ್ತಾ?
ಅಲ್ಲದೇ, ತಮ್ಮ ಸೇವಾ ಅವಧಿಯಲ್ಲಿ ತಾವು ನಡೆದುಬಂದ ಹಾದಿ, ಅನುಭವವನ್ನು ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಡಾ.ಪ್ರಭು ಸಾಹುಕಾರ್ ಮಾತನಾಡಿ, ಇಬ್ಬರಿಗೂ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಅವರ ಅನುಭವ ಹಾಗೂ ಸೇವೆಯನ್ನು ಶ್ಲಾಘಿಸಿದರು.
ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಾತನಾಡಿ ತಮ್ಮ ಅನಿಸಿಕೆ ಹಂಚಿಕೊಂಡರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಆಡಳಿತಾಧಿಕಾರಿ ತಿರುಮಲೇಶ್ ಅವರು ನಿವೃತ್ತಿ ಜೀವನ ಸಂತೋಷ್ ಹಾಗೂ ಆರೋಗ್ಯಕರವಾಗಿ ಇರಲಿ ಎಂದು ಹಾರೈಸಿದರು.
ಕೃಷ್ಣ ಸ್ವಾಗತಿಸಿ, ಚಂದ್ರಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಲಕ್ಷ್ಮೀದೇವಿ, ಮಂಜುಳಾ ಪ್ರಾರ್ಥಿಸಿ, ಮೇಘರಾಜ ನಿರೂಪಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post