ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಸ್ತುತ ದಿನಗಳಲ್ಲಿ ಯುವ ಜನತೆ ಧರ್ಮ, ಸಂಪ್ರದಾಯ, ಸಂಸ್ಕೃತಿ, ಮತ್ತು ಆಚಾರ-ವಿಚಾರಗಳ ಬಗ್ಗೆ ಅರಿವಿನ ಕೊರತೆ ಕಾಣಿಸುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣ ಹೊಸಪೇಟೆ ಬಡಾವಣೆಯ ಅಮರಜ್ಯೋತಿ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್‌ಮಸ್ #Christmas ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡ ನೋಯಲ್ ವೈಬ್ಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತ ಎಸ್.ಆರ್. ಮಧುಕೇಶ್ವರ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಮಾರು ಹೋಗದೇ, ಉತ್ತಮ ಆರೋಗ್ಯವನ್ನು ಸಂಪಾದಿಸಿ ಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡುವುದನ್ನು ಮೈಗೂಡಿಸಿ ಕೊಳ್ಳಬೇಕು. ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲಿ ಲಭ್ಯವಿದೆ. ಆದರೆ, ಇದನ್ನು ಜ್ಞಾನಾರ್ಜನೆ ಬಳಕೆ ಮಾಡಿಕೊಳ್ಳಬೇಕು ವಿನಃ, ಕಾಲಹರಣ ಸಲ್ಲದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಮತ್ತು ಸಾಹಿತ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ನಮ್ಮ ಪರಿಸರ, ಸಂಸ್ಕೃತಿ, ಮತ್ತು ಪ್ರಾದೇಶಿಕ ಜ್ಞಾನವನ್ನು ಬೆಳೆಸುವುದಕ್ಕೆ ತಂತ್ರಜ್ಞಾನವನ್ನು ಒಂದು ಸಾಧನವಾಗಿ ಬಳಸಬೇಕು. ಮೂಲ ಜ್ಞಾನವನ್ನು ಕಡೆಗಣಿಸಬಾರದು ಎಂದರು.

ಸಂಸ್ಥೆಯ ಪಾಂಶುಪಾಲೆ ಸಿಸ್ಟರ್ ಸಿಲ್ವಿಯಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ಸಿ. ಹರ್ಷಿತಾ, ಅಧ್ಯಾಪಕರಾದ ಸುಬ್ರಾಹ ಹಳ್ಳೇರ್, ನಟರಾಜ್, ಪ್ರಜ್ವಲ್, ಪ್ರಶಾಂತ್, ವೆಂಕಟೇಶ್, ಬಿಂದುಶ್ರೀ, ಶೀತಲ್, ಜುಬೇದಾ, ರಂಜಿತಾ, ಅನಿಲ್ ಕುಮಾರ್, ನಾಗರಾಜ್, ಸಚಿನ್, ಅಶ್ವಿನಿ, ಸುಪ್ರಿಯಾ, ಪದ್ಮಾವತಿ, ರೇನಿಟಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






Discussion about this post