ಕಲ್ಪ ಮೀಡಿಯಾ ಹೌಸ್ | ಸೊರಬ |
ಅರಣ್ಯ ಪರಿಸರ ಮಂತ್ರಾಲಯ, ಭಾರತ ಸರ್ಕಾರ, ಅರಣ್ಯ ಇಲಾಖೆ ಕರ್ನಾಟಕ, ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಜಂಟಿ ಆಶ್ರಯದಲ್ಲಿ ವರ್ಕಿಂಗ್ ಪ್ಲಾನ್- 2023ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಬೆಂಗಳೂರಿನ ಮರ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.
ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭಾಗವಹಿಸಿ, ಪಶ್ಚಿಮ ಘಟ್ಟದ ಸಂರಕ್ಷಣೆ ಹಿನ್ನೆಲೆಯಲ್ಲಿ ವರ್ಕಿಂಗ್ ಪ್ಲಾನ್‌ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ವಿವರ ಮಂಡನೆ ಮಾಡಿದರು.

ಸುಧಾರಣೆಗೆ ಹಲವು ವರ್ಷಗಳಿಂದ ಒತ್ತಾಯ: ಸರ್ಕಾರದ ಪಶ್ಚಿಮ ಘಟ್ಟ ಕಾರ್ಯಪಡೆ, ಜೀವವೈವಿಧ್ಯ ಮಂಡಳಿ, ರಾಜ್ಯ ಸರ್ಕಾರದ ಭೂಕುಸಿತ ಅಧ್ಯಯನ ಸಮಿತಿ ವಿವಿಧ ತಜ್ಞರು, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳ ವರದಿಗಳೂ ಅರಣ್ಯ ವರ್ಕಿಂಗ್ ಪ್ಲಾನ್‌ಗೆ ಹಲವು ಸುಧಾರಣೆಗಳನ್ನು ಸೂಚಿಸಿವೆ ಎಂದು ರಾಷ್ಟ್ರೀಯ ಕಾರ್ಯಾಗಾರದ ಗಮನ ಸೆಳೆದರು.

ವರ್ಕಿಂಗ್ ಪ್ಲಾನ್ ಕನ್ನಡದಲ್ಲಿ: ಕರ್ನಾಟಕದಲ್ಲಿ ವರ್ಕಿಂಗ್ ಪ್ಲಾನ್ ಕನ್ನಡ ಭಾಷೆಯಲ್ಲಿ ಇರಬೇಕು ಎಂಬ ಅಂಶವನ್ನು ಹತ್ತು ವರ್ಷಗಳಿಂದ ಹೇಳುತ್ತಿದ್ದೇವೆ. ಸ್ಥಳೀಯ ಜನರು, ರೈತರು, ಗ್ರಾಮ ಅರಣ್ಯ ಸಮಿತಿ, ಪಂಚಾಯತ, ಜೀವವೈವಿಧ್ಯ ಸಮಿತಿ, ವನವಾಸಿಗಳಿಗೆ ಓದಲು, ಅರ್ಥೈಸಲು ಸಾಧ್ಯವಾಗಬೇಕು. ಗುಜರಾತಿ ಭಾಷೆಯಲ್ಲಿ ವರ್ಕಿಂಗ್ ಪ್ಲಾನ್ ತಯಾರಾಗುತ್ತಿದೆ ಎಂದು ಅವರು ಉದಾಹರಣೆ ನೀಡಿದರು.

ಕೇಂದ್ರ ಸರ್ಕಾರದ ಅರಣ್ಯ-ಪರಿಸರ ಮಂತ್ರಾಲಯದ ಹಿರಿಯ ಅಧಿಕಾರಿಗಳಾದ ಡಾ.ಸುಬ್ರಹ್ಮಣ್ಯ, ಡಾ.ಎಂ.ಪಿ.ಸಿ0ಗ್, ಡಾ.ಮಹೇಶ್ ಶಂಭು, ಕರ್ನಾಟಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಾದ ಸುಭಾಷ್ ಮಾಳ್ಕೇಡ್, ಬಿಸ್ವಜಿತ್ ಮಿಶ್ರಾ, ಸೀಮಾ ಗರ್ಗ, ತಜ್ಞರಾದ ಡಾ.ವಾಮನ ಆಚಾರ್ಯ, ಪ್ರೋ. ಸುಹಾಸ್ ಮುಂತಾದವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಗುಜರಾತ, ಹರಿಯಾಣ, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post