ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ದಂತ ಅರೋಗ್ಯದ ಬಗ್ಗೆ ಅರಿವು ಹಾಗೂ ಮಾಹಿತಿ ನೀಡುವ ಅವಶ್ಯಕತೆಯಿದೆ ಎಂದು ರೋಟರಿ ಸಂಸ್ಥಾಪಕ ಅಧ್ಯಕ್ಷರಾದ ದಂತ ವೈದ್ಯ ಡಾ.ಜ್ಞಾನೇಶ್ ಹೇಳಿದರು.
Also read: ವಿದ್ಯೆ- ಗುರು ಪರಂಪರೆಗೆ ಗೌರವಿಸುವವರಿಗೆ ಮಾತ್ರ ಕಲೆ ಸಿದ್ಧಿ: ವಿದ್ವಾಂಸ ಚೆಲುವರಾಜು ಅಭಿಪ್ರಾಯ
ರೋಟರಿ ಸಂಸ್ಥೆಯ ಅಧ್ಯಕ್ಷ ಡಾ . ನಾಗರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೋಟರಿ ಸಂಸ್ಥೆಯು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಂತ, ಹಂತವಾಗಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ವತಿಯಿಂದ 71 ಮಕ್ಕಳಿಗೆ ಉಚಿತ ಟೂಥ್ ಪೇಸ್ಟ್ ಹಾಗೂ ಬ್ರಷ್ ವಿತರಿಸಲಾಯಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post