ಸೊರಬ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಎಐಸಿಟಿಯಿಂದ ಮಂಜೂರಾಗಿರುವ ಕೋರ್ಸ್‌ಗಳಿಗೆ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತಂತೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಎಐಸಿಟಿಯಿಂದ ಆಟೋಮೊಬೈಲ್ ಇಂಜೀನಿಯರಿಂಗ್, ಮೆಕ್ಯಾನಿಕಲ್ ಇಂಜೀನಿಯರಿಂಗ್, ಆರ್ಕಿಟೆಕ್ಚರ್ ಅಸಿಸ್ಟೆಂಟ್ ಶಿಪ್ ಕೋಸ್‌ಗಳು ಮಂಜೂರಾಗಿದ್ದು, ಇವುಗಳ ಆರಂಭಕ್ಕೆ ಮೂಲ ಸೌಕರ್ಯದ ಕೊರತೆಯಿದೆ. ಇದನ್ನು ನಿವಾರಣೆ ಮಾಡಿ, ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕ ಮಾಡಿ, ವಿದ್ಯಾರ್ಥಿಗಳ ಜೀವನಕ್ಕೆ ದಾರಿಯಾಗಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಡಿ.ಎಸ್. ರವಿಶಂಕರ್, ಸತೀಶ್ ಕುಮಾರ್, ಯಶೋಧರಾ, ಶೇಷಾಚಲ, ಜಾವೀದ್ ಅಹಮದ್, ರಾಜೇಂದ್ರ, ಪುನೀತ್ ಕುಮಾರ್, ನವೀನ್ ಸೇರಿದಂತೆ ಹಲವರಿದ್ದರು.
















