ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಶ್ರೀ ಅವಳಂಬಿಕ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಏರ್ಪಡಿಸಿದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವು ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ರೋಮಾಂಚನಕಾರಿ ಹೋರಿ ಹಬ್ಬವನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಹೋರಿ ಪ್ರಿಯರು ಜಮಾಯಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ಮಹತ್ವವಿದ್ದು,

Also read: ಒಂದೆಡೆ ವಿದ್ಯಾರ್ಥಿಗಳೇ ತಯಾರಿಸಿದ ತಿನಿಸುಗಳು, ಇನ್ನೊಂದಡೆ ಪೋಷಕರ ರ‍್ಯಾಂಪ್ ವಾಕ್
ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಯುವಕರು ಹೋರಿಗಳ ಹೆಸರಿನ ಧ್ವಜವನ್ನು ಹಿಡಿದು ಅಂಕಣದ ಸುತ್ತಲು ಸಂಭ್ರಮದಿಂದ ಕುಣಿಯುತ್ತ ಓಡಾಡುತ್ತಿದ್ದರು. ಪ್ರವೇಶ ದ್ವಾರದಿಂದ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಹೂವು, ಬಣ್ಣ ಬಣ್ಣದ ಶಾಟ್ಸ್ ಗಳನ್ನು ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ತೇರಿನಂತೆ ಕಾಣುವ ಪೀಪಿ ಹೋರಿ ಅಖಾಡದಲ್ಲಿ ಇಳಿಯುತ್ತಿದಂತೆ ಇತ್ತ ಹೋರಿ ಅಭಿಮಾನಿಗಳಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬರುತ್ತಿದ್ದವು,

ಹೋರಿ ಹಬ್ಬ ಆಯೋಜಿಸಿದ ಶಿಗ್ಗಾ ಗ್ರಾಮದ ಶ್ರೀ ಅವಳಂಬಿಕ ಯುವಕ ಸಂಘದವರು ಅಖಾಡದಲ್ಲಿ ಸುರಕ್ಷಿತವಾದ ಕ್ರಮ ಕೈಗೊಂಡು. ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದರು. ಉತ್ತಮವಾಗಿ ಓಡಿದ ಹೋರಿಗಳನ್ನು ಮತ್ತು ಬಲಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.
ವರದಿ: ಮಧುರಾಮ್, ಸೊರಬ










Discussion about this post