ಕಲ್ಪ ಮೀಡಿಯಾ ಹೌಸ್ | ಸೊರಬ |
ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪಟ್ಟಣದ ರೈತ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳೆಯಮ್ಮ ಚನ್ನಪಟ್ಟಣ ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಬೇಡ ಮನೆಯ ಮಹಾಲಕ್ಷ್ಮಿ ಉಳಿಸಿ ಹುಬ್ಬಳ್ಳಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣ ಇಡಿ ರಾಜ್ಯವೇ ಬೆಚ್ಚಿ ಬೀಳಿಸಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಠೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮದೋನ್ಮತ್ತರು ಕಾಯಿದೆಯ ಭಯವಿಲ್ಲದೇ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಬೇಕೆಂಬ ಸಾರ್ವಜನಿಕ ಆಗ್ರಹ ನಡೆಸುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಈ ಕೂಡಲೆ ಗೃಹ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು,
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ ಹುಬ್ಬಳ್ಳಿಯಲ್ಲಿ ನಡೆದ ಈ ಬರ್ಭರ ಹತ್ಯೆಯನ್ನು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲ. ಇದರ ಹಿಂದೆ ಇರುವುದು ಈ ದೇಶದ ಕಾನೂನನ್ನು ಧಿಕ್ಕರಿಸುವ ಮಾನಸಿಕತೆ ಅಡಗಿದೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮಾಡಿದವರನ್ನು ಸಮರ್ಥಿಸುವ ಮನಃಸ್ಥಿತಿ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡುವ ವಿಧ್ವಂಸಕ ಮನಃಸ್ಥಿತಿ ರಾಮನವಮಿಯ ದಿನ ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ಮಾಡುವ ಮನಃಸ್ಥಿತಿ.
ಈಗ ಹುಬ್ಬಳ್ಳಿಯಲ್ಲಿ ಹಾಡಹಗಲೇ ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡುವ ತಾಲಿಬಾನಿ ಮನಃಸ್ಥಿತಿ ಎಲ್ಲವೂ ಒಂದೆ. ಇದರ ಹಿಂದಿರುವ ಧೈರ್ಯ ಯಾವುದು ಗೊತ್ತೇ? ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯನವರೇ ಇದೇನಾ ನೀವು ಕಂಡ ಕನಸಿನ ಸರ್ವಜನಾಂಗದ ಶಾಂತಿಯ ತೋಟ? ಎಂದು ಪ್ರಶ್ನಿಸಿದರು.
ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ ಮಾತನಾಡಿ ಹಿಂದೂ ಕಾರ್ಯಕರ್ತರ ಮೇಲೆ.ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಇದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.ನೇಹಾಳ ಹತ್ಯೆಯಾಗಿದ್ದರು ಸರ್ಕಾರದ ಯಾವುದೇ ಸಚಿವರು ಸೌಜನ್ಯಕ್ಕೂ ಅವರ ಪೋಷಕರಿಗೆ ಸಾಂತ್ವನ ಹೇಳುವ ಕೆಲಸವಾಗಿಲ್ಲ ಎಂದು ದೂರಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಹೊಳಿಯಮ್ಮ, ಭಾಗ್ಯಶ್ರೀ, ಗೌರಮ್ಮ,ಆಶಾ, ರತ್ನಮ್ಮ, ಮನಸ್ವಿನಿ, ಜಯಲಕ್ಷ್ಮಿ, ಸಂಜಯ್ ಗೌಡ, ಹರೀಶ್, ಜನಕಪ್ಪ,ಆಶಿಕ್,ಮಧುರಾಯ್ ಶೇಟ್, ಸುದೀರ್ ಪೈ, ಲಿಂಗರಾಜ್, ಪ್ರಸನ್ನ ಶೇಟ್, ಮಂಜಣ್ಣ ಕರಡಿಗೇರೆ, ಪುನೀತ್, ಬಸವರಾಜ್, ಗುರುಮೂರ್ತಿ, ಸುರೇಶ್ ಸೇರಿದಂತೆ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post