ಕಲ್ಪ ಮೀಡಿಯಾ ಹೌಸ್ | ಸೊರಬ |
ಸ್ವ ಉದ್ಯೋಗದ ಮೂಲಕ ಸ್ವಾವಲಂಬಿತರನ್ನಾಗಿಸಿ ಆರ್ಥಿಕ ಸದೃಢತೆಯನ್ನು ಕಲ್ಪಿಸಿಕೊಡುವ ಉದ್ದೇಶ ಧರ್ಮಸ್ಥಳ ದರ್ಮಧರ್ಶಿ ವೀರೇಂದ್ರ ಹೆಗ್ಗಡೆಯವರದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಶಿಕಾರಿಪುರ ತಾಲ್ಲೂಕು ಕೃಷಿ ಯೋಜನಾಧಿಕಾರಿ ಗೋವಿಂದ ಗೌಡ ಹೇಳಿದರು.
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ಚನ್ನಪಟ್ಟಣದ ಜೀವಪ್ಪ ಅವರ ಕುರಿ ಸಾಕಾಣಿಕೆ ಘಟಕ, ನಾಟಿ ಕೋಳಿ ಸಾಕಾಣಿಕೆ ಘಟಕ, ಹಳೆ ಜೋಳದಗುಡ್ಡೆಯ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕ ಹಾಗೂ ಯಲಸಿ ಗ್ರಾಮದ ಗೌತಮ್ ಬಿಚ್ಚುಗತ್ತಿಯವರ ಜೇನು ಸಾಕಾಣಿಕೆ ಘಟಕ ಗಳಿಗೆ ಬೇಟಿ ನೀಡಿ ಅಂಬಾರಗೋಪ್ಪಾ ಗ್ರಾಮದ ಸ್ವಸಹಾಯ, ಪ್ರಗತಿಬಂಧು ಸಂಘದ ಸದಸ್ಯರಿಗೆ ಪರಿಚಯ ಮಾಡಿಸಿದರು.

ಸೊರಬ ತಾಲೂಕಿನ ಕೃಷಿ ಅಧಿಕಾರಿ ಲೋಕೇಶ್ ದೊಡ್ಡಬಾರ್ಕಿ ಇದ್ದು ಫಲಾನುಭವಿಗಳಿಗೆ ಸ್ವ ಉದ್ಯೋಗ ದ ಮಹತ್ವ, ಅಗತ್ಯತೆ ಕುರಿತು ಮಾರ್ಗದರ್ಶನ ನೀಡಿದರು.
ವರದಿ: ಮಧುರಾಮ್, ಸೊರಬ












Discussion about this post