ಕಲ್ಪ ಮೀಡಿಯಾ ಹೌಸ್
ಸೊರಬ: ಬೈಕ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಹಿಂಬಾದಿ ಸವಾರ ಪವಾಡ ಸದೃಷ ರೀತಿಯಲ್ಲಿ ಪಾರಾಗಿರುವ ಘಟನೆ ತಾಲೂಕಿನ ಕವಡಿ ಗ್ರಾಮದ ಕೆರೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಕವಡಿ ಗ್ರಾಮದ ಹಾಲೇಶ ಗೌಡ (33) ಮೃತ ದುರ್ಧೈವಿ. ನೆರೆಯ ಚಿಟ್ಟೂರು ಗ್ರಾಮದ ಶುಂಠಿ ಹೊಲಕ್ಕೆ ಔಷಧಿ ಸಿಂಪಡಣೆ ಮಾಡಲು ಕವಡಿ ಗ್ರಾಮದವರಾದ ರೇವಣಪ್ಪ ಮತ್ತು ಹಾಲೇಶ ಗೌಡ ಕೆರೆ ಏರಿ ಮೇಲೆ ತೆರಳುವಾಗ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಹಿಂಬದಿ ಸವಾರ ರೇವಣಪ್ಪ ಈಜಿ ದಡ ಸೇರಿದ್ದು, ಹಾಲೇಶ್‌ನನ್ನು ರಕ್ಷಿಸಲು ನಡೆಸಿದ ಯತ್ನ ವಿಫಲವಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಸೋಮವಾರ ತಡರಾತ್ರಿ ವರೆಗೂ ಒಬಿಎಂ ಬೋಟ್ ಸಹಾಯದಿಂದ ಶೋಧಕಾರ್ಯ ನಡೆಸಿ ಬೈಕ್ ಮಾತ್ರ ಪತ್ತೆ ಹಚ್ಚಲು ಸಾಧ್ಯವಾಯಿತು. ಮಂಗಳವಾರ ಬೆಳಗ್ಗೆ ಪುನಃ, ಶೋಧ ಕಾರ್ಯನಡೆಸಿ ಹಾಲೇಶ್‌ನ ಮೃತ ದೇಹವನ್ನು ಕರೆಯಿಂದ ಹೊರ ತಗೆದರು.


ಸ್ಥಳಕ್ಕೆ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಶಾಮಕ ಸಹಕಾಯಕ ಠಾಣಾಧಿಕಾರಿ ಮಹಾಬಲೇಶ್ವರ, ಸಿಬ್ಬಂದಿ ಮಹೇಶ ಮಡಿವಾಳ, ಕೆ.ಎನ್. ಪ್ರಶಾಂತ್, ಡಿ.ಬಿ. ರಾಜೇಂದ್ರ, ಡಿ.ಕೆ. ನಾಗರಾಜ, ಎಚ್.ಎಂ. ಪ್ರಸನ್ನಕುಮಾರ್ ಶೋಧ ಕಾರ್ಯ ನಡೆಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















