ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಹಿತ್ಯದ ಮೂಲಕವೂ ನಮ್ಮ ಪರಿಸರದ ಜಾಗೃತಿಯನ್ನು ಮೂಡಿಸಬಹುದು. ಹಿಂದಿನ ಹಲವಾರು ಗ್ರಂಥಗಳನ್ನು ಅವಲೋಕನ ಮಾಡಿದರೆ ಅದರಲ್ಲಿ ಪರಿಸರ ಪೂರಕ ಅಂಶಗಳು ಹೇರಳವಾಗಿ ದೊರಕುತ್ತದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.
ತಾಲ್ಲೂಕು ಗೊಗ್ಗೆಹಳ್ಳಿ ಪಂಚಮಠದಲ್ಲಿ ಇಲ್ಲಿನ ಕಸಾಸಾಂವೇ, ಕಜಾಪ ಮಹಿಳಾ ಘಟಕ ಹಮ್ಮಿಕೊಂಡಿದ್ದ ಕೃಷ್ಣತರಂಗಿಣಿ ಕೃತಿ ಬಿಡುಗಡೆ ಮತ್ತು ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಡಾ.ಅಜಿತ್ ಹೆಗಡೆ ಕೃತಿ ಅವಲೋಕಿಸಿ, ಕೃಷ್ಣನ ಕುರಿತು ಸಾಕಷ್ಟು ಕೃತಿಗಳು ಬಂದಾಗ್ಯೂ ಕೃಷ್ಣನ ಮೇಲೆ ಮುಂದಿನ ಹತ್ತು ತಲೆಮಾರು ಕಳೆದರೂ ಬರೆಯುವುದು ಮುಗಿಯುವುದಿಲ್ಲ. ಈ ಕೃತಿ ಸರಳ ಭಾಷೆಯಲ್ಲಿ ವಾಸ್ತವಕ್ಕನುಗುಣವಾಗಿ ಮನೋಜ್ಞವಾಗಿ ಚಿತ್ರಿಸುವಲ್ಲಿ ಬರಹಗಾರ್ತಿ ಪದ್ಮಜಾ ಯಶಸ್ವಿಯಾಗಿದ್ದಾರೆ ಎಂದರು.
ಕೃತಿ ಬಿಡುಗಡೆ ಮಾಡಿದ ಗೊಗ್ಗೆಹಳ್ಳಿ ಪಂಚಮಠದ ಶಿವಾನಂದ ಶಿವಾಚಾರ್ಯ ಶ್ರೀಗಳು, ಕೃತಿಕಾರರು, ಪ್ರಕಾಶಕರು ಒಂದು ಪುಸ್ತಕ ತರುವಲ್ಲಿನ ಶ್ರಮ, ಅದು ಜನಸಾಮಾನ್ಯರಿಗೆ ತಲುಪಲು ಅನುಸರಿಸ ಬೇಕಾದ ಭಾಷಾ ವೈಖರಿ ಕುರಿತು ಮಾತನಾಡಿದರು.
ಕೃತಿಕಾರ್ತಿ ಪದ್ಮಜಾ ಜೋಯ್ಸ್ ತೀರ್ಥಹಳ್ಳಿ ಕೃತಿಯ ಅನಾವರಣಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು. ಕಜಾಪ ಮಹಿಳಾಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಅಧ್ಯಕ್ಷತೆ ವಹಿಸಿದ್ದರು. ಕಸಾಸಾಂವೇ ಅಧ್ಯಕ್ಷ ಷಣ್ಮುಖಾಚಾರ್ ದಿಕ್ಸೂಚಿ ಮಾತನ್ನಾಡಿದರು. ಶಾಂತಮ್ಮ ಪ್ರಾರ್ಥಿಸಿ, ಗೌರಮ್ಮಭಂಡಾರಿ ನಿರೂಪಿಸಿದರು, ಶಂಕರಶೇಟ್ ಸ್ವಾಗತಿಸಿದರು. ಶ್ವೇತ ವಂದಿಸಿದರು.
ಸಾಹಿತಿ ಬಿದರಗೆರೆ ರೇವಣಪ್ಪ, ರಾಘವೇಂದ್ರಬಾಪಟ್, ಸರಸ್ವತಿ ನಾವುಡಾ, ವಿಜಯಗೌಳಿ, ಕಂಚಿಶಿವರಾಂ, ರಾಘವೇಂದ್ರ ಬನದಕೊಪ್ಪ, ಲಕ್ಷ್ಮೀನಾರಾಯಣ ಮುಟಗುಪ್ಪೆ, ಸುಬ್ಬರಾವ್ ಮುಟುಗುಪ್ಪೆ, ಇನ್ನೂ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post