ಕಲ್ಪ ಮೀಡಿಯಾ ಹೌಸ್ | ಸೊರಬ |
ಆಂಗ್ಲಭಾಷಾ ವಿಭಾಗ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿನಿ ನಿವೃತ್ತಿ ಹೊಂದಿದ ಎಸ್.ಸಿ. ಸದಾಶಿವ ಜೋಯಿಸ್ ಅವರಿಗೆ ಎಮ್‌ಡಿಎಫ್ ಸಂಸ್ಥೆ ಹಾಗೂ ಎಲ್‌ಬಿ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರೊಫೆಸರ್ ಎಸ್.ಸಿ. ಸದಶಿವ ರವರು ತಮ್ಮ ತಂದೆ ದಿ.ಚಂದ್ರಶೇಖರ ಜೋಯ್ಸ ತಾಯಿ ಶಾಂತಮ್ಮ ಹೆಸರಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜ್ ನಲ್ಲಿ 1ಲಕ್ಷ ರೂ ದತ್ತಿ ಸ್ಥಾಪನೆ ಮಾಡಿ ಅಂತಿಮ ಪದವಿಯಲ್ಲಿ ಸಂಸ್ಕೃತದಲ್ಲಿ ಹೆಚ್ಚು ಅಂಕಗಳನ್ನು ಪಡೆದ 2 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1ಲಕ್ಷ ರೂ ಚೆಕ್ಕನ್ನು ಅಧ್ಯಕ್ಷ ಹರನಾಥರಾವ್ ರವರಿಗೆ ಹಸ್ತಾಂತರ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಹರನಾಥ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕವಲಕೊಡು ವೆಂಕಟೇಶ್, ಸಹ ಕಾರ್ಯದರ್ಶಿ ಸತ್ಯನಾರಾಯಣ, ಪ್ರಾಂಶುಪಾಲರಾದ ಪ್ರೊ ಲಕ್ಷ್ಮೀಶ, ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.


ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















