ಕಲ್ಪ ಮೀಡಿಯಾ ಹೌಸ್ | ಸೊರಬ |
ಆಯನೂರಿನಲ್ಲಿ ನಡೆದ ಬಾರ್ ಕ್ಯಾಷಿಯರ್ ಸಚಿನ್ ಕುಮಾರ್ ಅವರ ಹತ್ಯೆ ಸಂದರ್ಭದಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ತಾಲ್ಲೂಕು ಮದ್ಯ ಮಾರಾಟ ಸಂಘದ ಅಧ್ಯಕ್ಷ ಯುವರಾಜ ಆರೋಪಿಸಿದರು.
ಜೂನ್ 4 ರಂದು ರಾತ್ರಿ ಆಯನೂರಿನ ಬಾರ್ ಕ್ಯಾಷಿಯರ್ ಸಚಿನ್ ಕುಮಾರ್ ಅವರು ಹತ್ಯೆಗೂ ಮೊದಲು ದುಷ್ಕರ್ಮಿಗಳು ಮದ್ಯ ಕುಡಿದು ಹಣ ಕೇಳಿದರೆ ಗಲಾಟೆ ಮಾಡುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ ಸ್ವಲ್ಪ ಹೊತ್ತಿಗೆ ಪೊಲೀಸರು ಆಗಮಿಸಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಉದ್ಯರ್ಮಿಗಳು, ಸಚಿನ್ ಕುಮಾರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದರೂ ರಕ್ಷಣೆ ಮಾಡದೆ, ಕರ್ತವ್ಯಲೋಪ ಎಸಗಿದ್ದಾರೆ. ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ಕಾನೂನು ರೀತಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಲ್ಲೆಯ ಬಹುತೇಕ ಬಾರ್ ಗಳಲ್ಲಿ ಕಾರ್ಮಿಕರೆ ಉಸ್ತುವಾರಿ ನೋಡುತ್ತಿದ್ದಾರೆ. ಕಾರ್ಮಿಕರ ಕೊರತೆ ಇರುವಾಗ ಈ ರೀತಿಯ ಕೊಲೆಯಿಂದ ವಲಸೆ ಹೋಗಿ ದುಡಿದು ತಿನ್ನುವ ಯುವಕರಿಗೆ ಭಯ ಎದುರಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ಮಗನ ಹತ್ಯೆಯಿಂದ ಅನಾಥವಾಗಿದೆ. ಸಂಬಂಧಪಟ್ಟ ಬಾರ್ ಮಾಲೀಕರು ಮೃತ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವಂತೆ ಒತ್ತಾಯಿಸಿದರು.
Also read: 14ನೇ ಬಜೆಟ್ ಮಂಡಿಸಲು ಸಜ್ಜಾಗಿರುವ ಆರ್ಥಿಕ ಜ್ಞಾನಿಗಳಿಗೆ ಗ್ಯಾರಂಟಿ ಜಾರಿ ಹೇಗೆಂಬುದು ಗೊತ್ತಿಲ್ಲವೆ?
ಜಿಲ್ಲೆಯಲ್ಲಿ ಗಾಂಜಾ ಡ್ರಗ್ಸ್ ಸೇವನೆಯಿಂದ ಇಂತಹ ಪ್ರಕರಣಗಳು ಮರುಕಳಿಸಿತ್ತಿದೆ. ಪೊಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕು ಎಂದು ನಾರಾಯಣ ಗುರು ವಿಚಾರ ವೇದಿಕ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು ತಿಳಿಸಿದರು.
ಸಚಿನ್ ಕುಮಾರ್ ಹತ್ಯೆ ಮಾಡಿದ ಆರೋಪ ಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಶಿಕ್ಷೆ ನೀಡದಿದ್ದರೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಕಾಶ್ ಕೆರೆಕೊಪ್ಪ, ಮಹೇಶ್ ಮಂಚಿ, ಶಿವಕುಮಾರ್, ಗುಡ್ಡಪ್ಪ, ಕೃಷ್ಣಮೂರ್ತಿ, ವಿನಯ್, ಭಾಸ್ಕರ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post