ಕಲ್ಪ ಮೀಡಿಯಾ ಹೌಸ್ | ಸೊರಬ |
ಜೇನುಗಳು ಮಾಯವಾದರೆ ಮನುಷ್ಯ ಜೀವನವೆ ಅಂತ್ಯ ಎಂಬುದನ್ನು ಈಗಾಗಲೇ ಹಿರಿಯ ವಿಜ್ಞಾನಿಗಳು ಸಾರಿಸಾರಿ ಹೇಳಿದ್ದಾರೆ. ಮಾನವನ ಸ್ವಾರ್ಥಕ್ಕೆ ಸಹಜ ಜೇನು ನೊಣಗಳು ವಿರಳವಾಗುತ್ತಿವೆ. ಈ ನಿಟ್ಟಿನಲ್ಲಿ ಜೇನು ಸಾಕಣಿಕೆ ಅತ್ಯವಶ್ಯವಾಗಿದೆ ಎಂದು ವಿಜ್ಞಾನಿ ಜೀವನ್ ಹಿರಳೆ ಹೇಳಿದರು.
ತಾಲ್ಲೂಕು ಯಲಸಿ ಸುವರ್ಣ ಜೇನು ಉದ್ಯಾನದಲ್ಲಿ ಸುವರ್ಣವನ, ಹೆಲ್ಪಿಂಗ್ ಹ್ಯಾಂಡ್ ಹಾಗೂ ನಿಸರಾಣಿ ಮಧುಬನ ಜೇನು ಸಂಸ್ಕರಣ ಮತ್ತು ಮಾರಾಟ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜೇನು ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ತರಬೇತಿ ಮೂಲಕ ಜೇನು ಸಾಕಣಿಕೆಗೆ ಮುಂದಾದರೆ ಸುಸ್ಥಿರ ಕೃಷಿಯ ಸುಧಾರಣೆ ಮತ್ತು ಪರಿಸರ ಸಮತೋಲನಕ್ಕೆ ಅತ್ಯುತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದರು.
ವಕೀಲ ಪ್ರಶಾಂತ್ ಹುಣವಳ್ಳಿ ಅಧ್ಯಕ್ಷತೆ ವಹಿಸಿ, ಜೇನು ಸಾಕಣಿಕೆ ಕೇವಲ ಜೇನು ತುಪ್ಪದ ಲಾಭ ಮಾತ್ರವಲ್ಲ, ಬೆಳೆಯ ಉತ್ಪಾದನೆ ಹೆಚ್ಚಿಸುವ ಅತ್ಯಂತ ಸರಳ ವಿಧಾನವೂ ಹೌದು. ಪ್ರಕೃತಿ ರಕ್ಷಣೆಯ ಸಹಜ ಪ್ರಕ್ರಿಯೆಯೂ ಹೌದು ಎಂದರು.
ಶಿರಸಿ ಉಂಚಳ್ಳಿ ಜೇನು ಕೃಷಿಕ ಲಕ್ಷ್ಮೀಶ್ ಭಟ್, ಕೋಡಂಬಿ ಈಶ್ವರ್, ಬೆಂಗಳೂರು ಹೀರಾಲಾಲ್, ಪ್ರಾದೇಶಿಕ ಭಿನ್ನತೆ, ತುಪ್ಪದ ಬಣ್ಣ, ರುಚಿಯ ಬದಲಾವಣೆ ಇತ್ಯಾದಿ ಕುರಿತ ಜೇನು ಕೃಷಿಯ ಅನುಭವ ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಗೌತಮ ಬಿಚ್ಚುಗತ್ತಿ, ವಿಘ್ನೇಶ್ ತಲಕಾಲಕೊಪ್ಪ ಪಾಲ್ಗೊಂಡರು.

50 ಶಿಬಿರಾರ್ಥಿಗಳು ಬೇರೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ಶಿಬಿರದ ಪ್ರಯೋಜನ ಪಡೆದರು.
ಸಿನೆಮಾ ತಂತ್ರಜ್ಞ ಜಿ.ಷಣ್ಮುಗಂ, ಕುಂದಾಪುರ ಪತ್ರಕರ್ತ ಪಿ. ಗಣೇಶ್, ಹೆಲ್ಪಿಂಗ್ ಹ್ಯಾಂಡ್ ನ ರಾಜೇಂದ್ರ ಕುಮಾರ್ ಜೈನ್, ಮಧುರಾಮ್, ಸದಾನಂದಗೌಡ, ಸ್ವಯಂಸೇವಕರಾಗಿ ಹೊಯ್ಸಳ, ವಿಲಾಸ್, ಜ್ಯೋತ್ಸ್ನ, ಕೀರ್ತಿ, ಕಸ್ತೂರಿ, ಕಿಶೋರ್ ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















