ಕಲ್ಪ ಮೀಡಿಯಾ ಹೌಸ್ | ಸೊರಬ |
ಗಜಮುಖ ಇವೆಂಟ್ಸ್ ವತಿಯಿಂದ ಸೊರಬ ಪಟ್ಟಣದ ಗಿರಿಜಾ ಶಂಕರ ಸಮುದಾಯ ಭವನ, ಅಮರಜ್ಯೋತಿ ಶಾಲೆಮುಂಭಾಗ ಚಂದ್ರಗುತ್ತಿ –ಸಿದ್ದಾಪುರ ರಸ್ತೆಯಲ್ಲಿ ಜುಲೈ 10, 11 ಹಾಗೂ 12, 2026 ರಂದು ಮೂರು ದಿನಗಳ ಕಾಲ ವೈವಿಧ್ಯಮಯ *‘ಹಲಸು ಮೇಳ’*ವನ್ನು ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ನಡೆಯಲಿರುವ ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
Also read: ಉದ್ಯಮದ ನಿರೀಕ್ಷೆಗೆ ಅನುಗುಣವಾಗಿ ಜ್ಞಾನ ವೃದ್ಧಿಸಿಕೊಳ್ಳಿ: ಶ್ರೀಕಾಂತ್ ನಾಡಿಗ್
ಇದೇ ವೇಳೆ, ವಿಶೇಷ ಆಕರ್ಷಣೆಯಾಗಿ ಹಳೆಯ ಜರಿ (ಸಿಲ್ಕ್) ಸೀರೆಗಳ ಸಂಗ್ರಹ ಮಾಡಲಾಗುತ್ತಿದ್ದು, ನೀಡುವವರಿಗೆ ಸ್ಥಳದಲ್ಲೇ ನಗದು ಪಾವತಿ ಮಾಡಲಾಗುತ್ತದೆ.
ಸೊರಬ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ಮಹಿಳೆಯರು, ರೈತರು, ಆಹಾರಪ್ರಿಯರು ಹಾಗೂ ಕುಟುಂಬ ಸಮೇತರಾಗಿ ಆಗಮಿಸಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಗಜಮುಖ ಇವೆಂಟ್ಸ್ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ: 8970088963 – ಗಜಮುಖ ಇವೆಂಟ್ಸ್, ಆಯೋಜಕರು
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

