ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಕಬಡ್ಡಿ ಕ್ರೀಡೆಯು ಜಗತ್ತಿನಾದ್ಯಂತ ಒಂದು ದೊಡ್ಡ ಕ್ರೀಡೆ ಆಗಲಿ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು ಹೇಳಿದರು.
ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮದಲ್ಲಿ ಶನಿವಾರದಂದು ಶ್ರೀ ಬೀರೇಶ್ವರ ಗೆಳೆಯರ ಬಳಗ ಹಾಗೂ ಶ್ರೀ ಶನೇಶ್ವರ ದೇವರ ಕಾರ್ತಿಕೋತ್ಸವ ಅಂಗವಾಗಿ ಆಯೋಜಿಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಅಂಕಣ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕ್ರೀಡೆಯ ಜೊತೆಗೆ ಈ ಊರಿನಲ್ಲಿ ಮತ್ತು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ ಸೊರಬದಲ್ಲಿ ನಾಲ್ಕುವರೆ ವರ್ಷದಲ್ಲಿ ಅಭಿವೃದ್ಧಿಯ ಮಹಾಪರುವೆ ಆಗಿದೆ ತಾಲೂಕಿನಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದರೆ ಈ ಗ್ರಾಮದ ಶ್ರೀ ಶನೇಶ್ವರ ದೇವಸ್ಥಾನವೇ ಸಾಕ್ಷಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಸ್ ಆರ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ, ತಾಲೂಕಿನಲ್ಲಿ 1500 ಕೋಟಿಯಷ್ಟು ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಆಗುತ್ತಿದೆ, ಒಟ್ಟು ತಾಲೂಕಿನಲ್ಲಿ ತನ್ನ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಕುಮಾರ್ ಬಂಗಾರಪ್ಪ ಅವರು ಹಲವಾರು ಅನುದಾನ ತರುವುದರ ಮೂಲಕ ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಅಧ್ಯಕ್ಷ ಅಣ್ಣಪ್ಪ ಚಿಟ್ಟಕ್ಕಿ ವಹಿಸಿ, ಊರಿನ ಹಿರಿಯರಾದ ವೆಂಕಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಬೆನ್ನೂರು ಗ್ರಾ.ಪಂ ಅಧ್ಯಕ್ಷ ಎಂ.ಕೆ ದೇವರಾಜ್ ಮಾತನಾಡಿ ಗ್ರಾಮೀಣ ಕ್ರೀಡೆ ಕಬಡ್ಡಿ ಆಗಿದ್ದು,ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮನೋಭಾವ ಯುವಕರಲ್ಲಿ ಹೆಚ್ಚಬೇಕು ಜೀವನದಲ್ಲಿ ಉಜ್ವಲ ಭವಿಷ್ಯ ಹೊಂದಬೇಕಾದರೆ ಉತ್ತಮ ಆರೋಗ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಸಬೇಕು ಅಂದಾಗ ಮಾತ್ರ ಯುವಕರ ಜೀವನದಲ್ಲಿ ದೊಡ್ಡ ಸಾಧನೆ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
Also read: ಮುಂದಿನ ಪೀಳಿಗೆಗೂ ಕನ್ನಡದ ಬಗ್ಗೆ ಅರಿವು ಮೂಡಿಸಿ: ಮಂಜಪ್ಪ ಕರೆ
ಬಹುಮಾನ: ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಮೂಡದೀವಳಿಗೆ ತಂಡ, ದ್ವಿತೀಯ ಬಹುಮಾನ ಗಜಕೇಸರಿ ತಂಡ, ತೃತೀಯ ಬಹುಮಾನ ಭದ್ರಾಪುರ ತಂಡ, ಚತುರ್ಥ ಬಹುಮಾನ ಬಾಡದ ಬಯಲು ತಂಡದವರು ಪಡೆದರು,
ಬಿಜೆಪಿ ಮುಖಂಡ ಈಶ್ವರಪ್ಪ ಚನ್ನಪಟ್ಟಣ, ಗ್ರಾಮದ ಉಪಾಧ್ಯಕ್ಷ ಮಂಜಪ್ಪ, ಹರೀಶಿ ಗ್ರಾ.ಪಂ ಅಧ್ಯಕ್ಷ ವಜ್ರಕುಮಾರ್, ಬೆನ್ನೂರು ಗ್ರಾ.ಪಂ ಸದಸ್ಯರಾದ ವಿನಾಯಕ್ ಹೆಗಡೆ, ಶಿಲ್ಪ ರವಿ, ರಾಧಮ್ಮ ಮಂಜಪ್ಪ, ಪ್ರಮುಖರಾದ ವೆಂಕಪ್ಪ, ರಾಜು ಕೆಂಚಿಕೊಪ್ಪ, ವಸಂತ್ ಕುಮಾರ್, ರಮೇಶ್, ರಾಜು ಮಾವಿನಬಳ್ಳಿಕೊಪ್ಪ, ಚಂದ್ರು ಭದ್ರಾಪುರ, ದೇವರಾಜ್ ಹುಲ್ತಿಕೊಪ್ಪ ಧರ್ಮಣ್ಣ ಚನ್ನಪಟ್ಟಣ, ರಾಘವೇಂದ್ರ ಸೇರಿದಂತೆ ಊರಿನ ಎಲ್ಲಾ ಗಣ್ಯರು ಹಾಗೂ ಬೀರೇಶ್ವರ ಗೆಳೆಯರ ಬಳಗದ ಸ್ನೇಹಿತರು ಉಪಸ್ಥಿತರಿದ್ದರು,
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post