ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ತಾಲ್ಲೂಕಿನಲ್ಲಿ ಭೂಮಿ ಹುಣ್ಣಿಮೆ #Bhoomi Hunnime ಹಬ್ಬವನ್ನು ರೈತರು ಇಂದು ಸಡಗರದಿಂದ ಆಚರಿಸಿದರು. ಹಚ್ಚ ಹಸಿರು ಬೆಳೆಗಳಿಂದ ಕಂಗೊಳಿಸುತ್ತಿರುವ ಹೊಲಗಳಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿದವು.
ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭೂಮಿಗೆ ಗರ್ಭಿಣಿಯ ಪ್ರತೀತಿಯನ್ನು ನೀಡಲಾಗುತ್ತದೆ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಈಗ ಹಾಲು ತುಂಬಿದಂತಿರುವ ಈ ಕಾಲದಲ್ಲಿ, ಭೂಮಿ ತಾಯಿಗೆ ಸೀಮಂತದಂತೆ ಪೂಜೆ ಸಲ್ಲಿಸಲಾಗುತ್ತದೆ.


ಭೂಮಿ ಹುಣ್ಣಿಮೆ ಹಬ್ಬ ರೈತರ ಜೀವನದಲ್ಲಿ ಶ್ರದ್ದೆ ಮತ್ತು ಭಾವನಾತ್ಮಕ ಒಲವಿನಿಂದ ಕೂಡಿದೆ. ಬೆಳೆಗಳಲ್ಲಿ ಸಿರಿ ಮೂಡಿದಾಗ ಭೂಮಿ ತಾಯಿಗೆ ನೀಡುವ ಸೀಮಂತದ ಸಂಭ್ರಮವು ಇವರ ಜೀವನದ ಅವಿಭಾಜ ಭಾಗವಾಗಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post