ಕಲ್ಪ ಮೀಡಿಯಾ ಹೌಸ್ | ಸೊರಬ |
ಪೂರ್ವದಿಂದಲೂ ಜನಪದ, ಸಾಂಸ್ಕೃತಿಕ ಸಂಸ್ಕೃತಿ ಹೊಂದಿರುವ, ಪ್ರತಿ ಮನೆಯಲ್ಲಿಯೂ ಒಬ್ಬರಲ್ಲ ಒಬ್ಬರು ಕಲಾ ಸಾಧಕರಿರುವ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕಡಸೂರು ಗ್ರಾಮದಲ್ಲಿ ದೀಪಾವಳಿಯ ಮರು ದಿನಗಳ ಬಿಡುವಿನ ವೇಳೆ ವಿವಿಧ ಜನಪದ ಕಲೆಯನ್ನು ಅನಾವರಣಗೊಳಿಸುವ ಮೂಲಕ ಅಲ್ಲಿನ ಗ್ರಾಮಸ್ಥರು ಗಮನ ಸೆಳೆದಿದ್ದಾರೆ.
ಮಲ್ಲಕಂಬ ಅಥವಾ ಎಣ್ಣೆಕಂಬ ಏರುವ ಸಾಹಸ ಪ್ರದರ್ಶನ ನಡೆದು ಕಾರೆಹೊಂಡದ ಯುವಕ ಯೋಗರಾಜ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
Also read: ಎನ್’ಸಿಇಆರ್’ಟಿ ಪಠ್ಯಕ್ಕೆ ರಾಮಾಯಣ, ಮಹಾಭಾರತ ಸೇರ್ಪಡೆ? ಮಂಡಳಿ ಶಿಫಾರಸ್ಸೇನು?
ಹಗ್ಗಜಗ್ಗಾಟದಲ್ಲಿ ಸುವರ್ಣ ಟೀಂ ಪ್ರಥಮ, ಸುಶೀಲ ಟೀಂ ದ್ವಿತೀಯ, ನಿಧಾನ ಸೈಕಲ್ ಸ್ಪರ್ಧೆಯಲ್ಲಿ ಆರ್.ನೂತನ್, ಯೋಗರಾಜ್, ದರ್ಶನ ಕ್ರಮವಾಗಿ ಬಹುಮಾನ ಪಡೆದಿದ್ದಾರೆ. ಸಂಗೀತ ಕುರ್ಚಿಯಲ್ಲಿ ಹೆಚ್.ಗಂಗಮ್ಮ, ಶಶಿಕಲಾ, ಯುವಕರ ವಿಭಾಗದಲ್ಲಿ ಟಿ.ಗಣಪತಿ, ಕೆ.ಎಲ್.ಮಂಜಪ್ಪ, ಲಿಂಬು ಚಮಚ ಸ್ಪರ್ಧೆಯಲ್ಲಿ ಯೋಗರಾಜ್, ವೀರೇಶ್, ಯುವತಿಯರ ವಿಭಾಗದಲ್ಲಿ ಅಕ್ಷತಾ, ರೇಖಾ, ಕೆರೆದಡ ಸ್ಪರ್ಧೆಯಲ್ಲಿ ತನ್ಮಯ, ರೇಖಾ, ಕ್ರಮವಾಗಿ ಬಹುಮಾನ ಪಡೆದಿದ್ದಾರೆ.

ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















