ಸೊರಬ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ರೋಟರೆ ಕ್ಲಬ್ ಅಧ್ಯಕ್ಷ ಶಂಕರ್.ಡಿ.ಎಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉಳವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್‌ನಿಂದ ನೃತ್ಯಪಟು ಕುಮಾರಿ ಮಹಾಲಕ್ಷ್ಮಿಗೆ ಸನ್ಮಾನಿಸಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ. ಯಾವುದೇ ಪ್ರತಿಭೆ ಆಗಿರಲಿ ಅವರವರ ಪ್ರತಿಭೆಗೆ ತಕ್ಕ ಹಾಗೆ ಪ್ರೊತ್ಸಾಹಿಸಬೇಕು. ಪ್ರತಿಯೊಬ್ಬ ಮಕ್ಕಳೂ ಸಹಾ ಏಕಾಗ್ರತೆಯಿಂದ ತಮ್ಮ ಪ್ರತಿಭೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಸಾಧನೆ ಗೈಯಲು ಸಾಧ್ಯ. ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟದ ಕುಮಾರಿ ಮಹಾಲಕ್ಷ್ಮಿ ತನ್ನ ಪ್ರತಿಭೆಯಿಂದ ರಾಜ್ಯಮಟ್ಟದ ಟಿ.ವಿ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರುವುದು ಅವರ ಕುಟುಂಬಕ್ಕೆ ಅಷ್ಟೆ ಅಲ್ಲದೆ ಗ್ರಾಮಕ್ಕೆ, ತಾಲೂಕಿಗೆ ಹೆಮ್ಮಯನ್ನು ತಂದುಕೊಟ್ಟಿದೆ ಎಂದರು.
ನಿಕಟ ಪೂರ್ವ ಅಧ್ಯಕ್ಷ ನಾಗರಾಜ ಗುತ್ತಿ ಮಾತನಾಡಿ, ಮಹಾಲಕ್ಷ್ಮಿ ಯಂತಹ ಪ್ರತಿಭೆಯು ಬೇರೊಂದು ಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾಳೆ. ರೋಟರಿ ಕ್ಲಬ್ ಈ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾಥಿಗಳನ್ನು ಗುರುತಿಸುವ ಜವಾಬ್ದಾರಿಯುತ ಕೆಲಸ ಮಾಡಲಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಈರಪ್ಪಯ್ಯ ವಹಿಸಿದ್ದರು. ಅತಿಥಿಗಳಾಗಿ ದಾನಪ್ಪ, ರೋಟರಿ ಕಾರ್ಯದರ್ಶಿ ಯಶೋಧರ, ಶಿವಕುಮಾರ್ ಸ್ವಾಮಿ, ರಾಜು ಹಿರಿಯಾವಲಿ, ಉಮೇಶ್ ಗೌಡ, ಕರಿಬಸಪ್ಪ, ಶಿಕ್ಷಕರಾದ ನಾಗರಾಜ.ಹೆಚ್, ಬೋಜರಾಜ, ಮಲ್ಲಮ್ಮ, ಲಲೀತಮ್ಮ, ಕನ್ಯಾನಾಯಕ್, ರವಿಕುಮಾರ್ ಮತ್ತಿತರರಿದ್ದರು. ಸುರೇಶ್ ಸ್ವಾಗತಿಸಿದರು. ರವಿಕುಮಾರ್ ವಂದಸಿದರು.
(ವರದಿ: ಮಹೇಶ್ ಗೋಖಲೆ, ಸೊರಬ)
Discussion about this post