ಕಲ್ಪ ಮೀಡಿಯಾ ಹೌಸ್ | ಸೊರಬ |
ಶೂನ್ಯ ಬಂಡವಾಳ, ಅಧಿಕ ಆದಾಯ, ಕೃಷಿ ಅಭಿವೃದ್ಧಿ ಪೂರಕ ಯೋಜನೆಯಾಗಿರುವ ಜೇನು ಕೃಷಿಯತ್ತ ಕೃಷಿಕರು ಮುಂದಾಗಬೇಕು ಎಂದು ಭಾರತ ಸರ್ಕಾರದ ಕೆವಿಐಸಿ ಅಧ್ಯಕ್ಷ ಮನೋಜ ಕುಮಾರ್ ಕರೆ ನೀಡಿದರು.
ತಾಲ್ಲೂಕು ನಿಸರಾಣಿ ಗ್ರಾಮದಲ್ಲಿ ಇಲ್ಲಿನ ಮಧುಬನ ಜೇನುಕೃಷಿ ಸಂಘದವರು ಕೆವಿಐಸಿ ಸಹಯೋಗದೊಂದಿಗೆ ಹನಿ ಮಿಷನ್ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಜೇನು ಪೆಟ್ಟಿಗೆ ವಿತರಣೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಕೆವಿಐಸಿ ಮೂಲಕ ಜೇನು ಕೃಷಿಗೆ ಸಾಕಷ್ಟು ಒತ್ತು ನೀಡುತ್ತಿದ್ದು, ಯೋಜನೆಯ ಸೌಲಭ್ಯವನ್ನು ಪಡೆಯಬೇಕು.
-ರಾಮಚಂದ್ರನ್, ಕೆವಿಐಸಿ ಅಧಿಕಾರಿ

ಹಲವು ಫಲಾನುಭವಿಗಳಿಗೆ ಜೇನುಪೆಟ್ಟಿಗಳನ್ನು ವಿತರಿಸಿದರು.
ತಾಳ್ಮೆ, ಸಹನೆ, ಶ್ರದ್ಧೆಯಿದ್ದರೆ ಜೇನು ಕೃಷಿ ಅತ್ಯಂತ ಸರಳ. ಯಾವುದೇ ಬೆಳೆಯ ಹೆಚ್ಚಳಕ್ಕೆ ಜೇನು ಅವಶ್ಯ.
-ಅನಂತಹೆಗಡೆ ಹೊನ್ನಾವರ
ಜೇನು ಕೃಷಿ ತರಬೇತುದಾರಸುಸ್ಥಿರ ಕೃಷಿ ಅಭಿವೃದ್ಧಿ, ಜೀವವೈವಿಧ್ಯ ಸಮತೋಲನಕ್ಕೆ ಜೇನು ಕೃಷಿ ಅತ್ಯಂತ ಪೂರಕ. ಯೋಜನೆ ಸದುಪಯೋಗ ಆಗಲಿ.
-ಶ್ರೀಪಾದ ಬಿಚ್ಚುಗತ್ತಿ
ರಾಜ್ಯ ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ
ರಾಜ್ಯ ಕೆವಿಐಸಿ ಉಪ ನಿರ್ದೇಶಕ ಸೆಂಥಿಲ್ ಕುಮಾರ್ ರಾಮಸ್ವಾಮಿ, ದಕ್ಷಿಣ ವಿಭಾಗದ ಡೆಪ್ಯುಟಿ ಸಿಇಒ ಆರ್. ಎಸ್. ಪಾಂಡೆ, ನಿಸರಾಣಿ ಗ್ರಾಪಂ ಅಧ್ಯಕ್ಷ ಕುಮಾರ್, ತಾಲ್ಲೂಕು ಜೀವವೈವಿಧ್ಯ ನಿರ್ವಹಣ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಅಧಿಕಾರಿಗಳಾದ ಮೋಸಿನ್, ರಾಮಚಂದ್ರನ್, ಮರಾಠೆ, ಭಾನುಪ್ರಸಾದ್, ಜೇನುಕೃಷಿಕ ವಿಘ್ನೇಶ್ ತಲಕಾಲಕೊಪ್ಪ ಪಾಲ್ಗೊಂಡರು.

ತಾಲ್ಲೂಕು ಪ್ರಮುಖರಾದ ಸುಜಾತ ಜೋತಾಡಿ, ನಿರಂಜನ ಕುಪ್ಪಗಡ್ಡೆ, ವಿ.ಜಾನಕಪ್ಪ, ಮೋಹನ್ ಸುರಭಿ, ಜೇನು ಕೃಷಿಕ ಗೌತಮ ಬಿಚ್ಚುಗತ್ತಿ, ಗ್ರಾಮಸ್ಥರು, ಜೇನು ಬೆಳೆ ಆಸಕ್ತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post