ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿಂದೊಮ್ಮೆ ಪ್ರಸಿದ್ಧ ವಾಣಿಜ್ಯ, ಜೈನ ನೆಲೆಯಾಗಿದ್ದ, ವಿಜಯನಗರ ಕಾಲದಲ್ಲಿ ಅತಿದೊಡ್ಡ ಕಂಪಣವಾಗಿ ಗುರುತಿಸಿಕೊಂಡಿದ್ದ ಚಂದ್ರಗುತ್ತಿಗೆ ಮಾಂಡಳೀಕರಾಗಿದ್ದ ಕನಕದಾಸರು ಭೇಟಿ ನೀಡಿದ ಬಗ್ಗೆ ಉಲ್ಲೇಖ ವಿದೆ ಎಂದು ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ತಾಲೂಕು ಕಾರೆಹೊಂಡ ಸಕಿಪ್ರಾ ಶಾಲೆಯಲ್ಲಿ ಕನಕ ಜಯಂತಿ ಕಾರ್ಯಕ್ರಮದ ಅಂಗವಾಗಿ ಕನಕದಾಸರ ಹುಟ್ಟೂರು ಬಾಡದ ನೆಲೆ ಶೋಧಕಾರ್ಯವನ್ನು ನೆನಪಿಸಿಕೊಂಡು ಪ್ರಾತ್ಯಕ್ಷಿಕೆ ನೀಡಿದರು.
ಇದೇ ವೇಳೆ ಕನಕದಾಸರ ಜೊತೆಗೆ ವೀರವನಿತೆ ಒನಕೆ ಓಬವ್ವ ನೆಲೆ ಚಿತ್ರದುರ್ಗ ಕೋಟೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಶಾಲಾ ಸಮಿತಿ ಅಧ್ಯಕ್ಷ ಕೆರೆಯಪ್ಪ, ಸದಸ್ಯರಾದ ಚೌಡಪ್ಪ, ಶಂಕರಪ್ಪ, ಕಾಳಪ್ಪ, ಜಯಪ್ಪ, ಶಿಕ್ಷಕಿ ಸಾವಿತ್ರಮ್ಮ, ಪ್ರತಿಮಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಬಿಸಿಯೂಟ ಸಹಾಯಕಿ ನೀಲಮ್ಮ, ಸಾವಿತ್ರಮ್ಮ ಮತ್ತಿತರರಿದ್ದರು.
ಸೊರಬ ತಾಲೂಕಿನ ಕಾರೆಹೊಂಡ ಗ್ರಾಮದ ಸಕಿಪ್ರಾಶಾಲೆಯಲ್ಲಿ ಕನಕದಾಸಜಯಂತಿ ಅಂಗವಾಗಿ ಅವರ ಸ್ವಗ್ರಾಮ ಬಾಡದ ನೆಲೆ ಶೋಧದ ಪ್ರಾತ್ಯಕ್ಷಿಕೆ ಯನ್ನು ತೋರಿಸಲಾಯಿತು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post