ಕಲ್ಪ ಮೀಡಿಯಾ ಹೌಸ್ | ಸೊರಬ |
ಡಿ.17ರಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲ್ಲೂಕು ಘಟಕದ ವತಿಯಿಂದ 2025–2026ನೇ ಸಾಲಿನ ನಿವೃತ್ತ ನೌಕರರ ದ್ವಿತೀಯ ವಾರ್ಷಿಕ ಮಹಾಸಭೆ, ಪಿಂಚಣಿದಾರರ ದಿನಾಚರಣೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಲ್ಲಪ್ಪ ಚಿತ್ರಟ್ಟಿಹಳ್ಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿವೃತ್ತ ನೌಕರರ ದ್ವಿತೀಯ ವಾರ್ಷಿಕ ಮಹಾಸಭೆ, ಪಿಂಚಣಿದಾರರ ದಿನಾಚರಣೆ ಹಾಗೂ 75 ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರು, ದೇಹದಾನಿಗಳು ಮತ್ತು ನೇತ್ರದಾನಿಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಬೆಳಗ್ಗೆ 10.30 ಗಂಟೆಗೆ ತಾಲ್ಲೂಕಿನ ಆನವಟ್ಟಿಯಲ್ಲಿರುವ ವೀರಶೈವ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಿವೃತ್ತ ನೌಕರರ ಪಿಂಚಣಿ ಸಮಸ್ಯೆಗಳು, ಸಂಘದ ಚಟುವಟಿಕೆಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಯಲಿದ್ದು, ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿರುವ ಹಿರಿಯ ನಿವೃತ್ತ ನೌಕರರು, ದೇಹದಾನಿಗಳು ಹಾಗೂ ಕಣ್ಣುದಾನಿಗಳನ್ನು ಗೌರವಿಸಲಾಗುವುದು ತಾಲ್ಲೂಕಿನ ನಿವೃತ್ತ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಹೆಚ್. ಜಯಪ್ಪ ಆನವಟ್ಟಿ, ಶಿವಲಿಂಗಪ್ಪ ಎಸ್. ಸೊರಬ, ಪ್ರಧಾನ ಕಾರ್ಯದರ್ಶಿ ಕೆ. ಬಸವಣ್ಯಪ್ಪ ಕುಮ್ಮೂರು, ಖಜಾಂಚಿ ವಿ.ಬಿ. ಜಾವೂರ ಸೊರಬ, ಸಹ ಕಾರ್ಯದರ್ಶಿ ಪಿ.ಎಸ್. ಶಿವಪ್ಪ ಪುಟ್ಟನಹಳ್ಳಿ–ಜಡೆ, ಲೆಕ್ಕಪರಿಶೋಧಕ ರವೀಂದ್ರ ನಾಯಕ್ ಆನವಟ್ಟಿ, ಆಂತರಿಕ ಲೆಕ್ಕಪರಿಶೋಧಕ ಕುಬೇರಪ್ಪ ಆರ್. ಚಿಕ್ಕಶಕುನ–ಸೊರಬ, ಸಂಘಟನಾ ಕಾರ್ಯದರ್ಶಿಗಳಾದ ಪರಮೇಶ್ವರಪ್ಪ ಎಂ. ಕುಬಟೂರು, ಎಂ.ಆರ್. ಶಿವಪ್ಪ ಶಿರಾಳಕೊಪ್ಪ, ಸಾಂಸ್ಕೃತಿಕ ಕಾರ್ಯದರ್ಶಿ ವಿನಾಯಕ ಬೊಂಗಾಳೆ ಕುಪ್ಪಗಡ್ಡೆ, ಕ್ರೀಡಾ ಕಾರ್ಯದರ್ಶಿ ಶಶಿಕಲಾ ಎ. ಸೊರಬ, ಸಂಚಾಲಕ ಮಹಾದೇವಪ್ಪ ಡಿ. ಸೊರಬ, ನಿರ್ದೇಶಕ ಖಲೀಲ್ ಸಾಬ್ ಹಾಯ ಕುಪ್ಪಗಡ್ಡೆ ಹಾಗೂ ನಾಮ ನಿರ್ದೇಶಕರಾದ ದತ್ತಪ್ಪ ಎಂ. ಆನವಟ್ಟಿ, ಸುಭಾಷ್ ಪಂಡಿತ್ ಕೆ.ಎಂ. ಕುಬಟೂರು, ಪರಶುರಾಮಪ್ಪ ಕೆ. ಆನವಟ್ಟಿ, ಬಸವಂತಪ್ಪ ಎನ್. ಮೊರಬ, ಬಂಗಾರಮ್ಮ ಕೆ.ಬಿ. ಸೊರಬ ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















