ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ: ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೊರಬ ತಾಲೂಕಿನ ಪಟ್ಟಣದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಶನಿವಾರ ಸಂಜೆ ಪಂಜಿನ ಮೆರವಣಿಗೆ ನಡೆಯಿತು.
ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಮುಖ್ಯ ಬೀದಿಗಳಲ್ಲಿ ಸಾಗಿ. ನಂತರ ತಾಲೂಕಿನ ಆರಾಧ್ಯ ದೈವ ಶ್ರಿ ರಂಗನಾಥ ದೇವಾಲಯ ಆವರಣ ತೆರಳಿ ಕಾನುಕೇರಿ ಮಠದ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಕ್ಕು ಅಧಿಕ ಮಂದಿ ಭಾಗಿಯಾಗಿದ್ದರು.ಜೈಕಾರ ಇದರ ನಡುವೆ ಕೇಸರಿ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ಸಾಗಿದರು.
ಭಾರತ ಮಾತೆಗೆ ಹೂವನ್ನು ಅರ್ಪಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ ದಿಕ್ಕೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ್ ದೇವರಾಜ್ ಅರಳಿಹಳ್ಳಿ , ಅಖಂಡ ಭಾರತಕ್ಕಾಗಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಅಂದಿನ ಕೆಲವರ ಸ್ವಾರ್ಥದಿಂದಾಗಿ ದೇಶ ವಿಭಜನೆ ಮಾಡುವ ಮೂಲಕ ಅಪಮೌಲ್ಯಗೊಳಿಸಲಾಯಿತು. ಅಂದು ನೂರಾರು ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟವು ಈಗಿನ ನಮ್ಮ ನಕ್ಷೆಯಲ್ಲಿನ ಭಾರತಕ್ಕಾಗಿ ಆಗಿರಲಿಲ್ಲ. ಪಾಕಿಸ್ಥಾನ ಬಾಂಗ್ಲಾದೇಶಗಳನ್ನೊಳಗೊಂಡ ಭೂಪ್ರದೇಶವೂ ಭಾರತದ ಭೂಭಾಗಗಳೇ ಆಗಿದ್ದವು. ಕೆಲವರ ತಪ್ಪು ನಿರ್ಧಾರಗಳು ದೇಶವನ್ನೇ ಮತೀಯ ಆಧಾರದಲ್ಲಿ ಚೂರು ಚೂರು ಮಾಡಿತು ಮತೀಯ ಆಧಾರದಲ್ಲಿ ದೇಶ ವಿಭಜನೆ ಮಾಡಿದವರು ಇಂದು ತಮ್ಮ ಹೊಟ್ಟೆಪಾಡಿನ ರಾಜಕೀಯಕ್ಕಾಗಿ ಜಾತ್ಯಾತೀತತೆಯ ಮಂತ್ರ ಜಪಿಸುತ್ತಾ ನಾವೆಲ್ಲರೂ ಒಂದೇ ಎನ್ನುತ್ತಿರುವುದು ಸ್ವಾತಂತ್ರ್ಯ ಭಾರತದ ದುರಂತವೇ ಆಗಿದೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಷ || ಬ್ರ || ಘನ ಬಸವ ಶಿವಾಚಾರ್ಯರು ಹಿರೇಮಠ ಜಡೆ, ಮಾತನಾಡಿ, ಈ ದೇಶದ ಗಡಿಗಳನ್ನು ಹಗಲಿರುಳು ಸೈನಿಕರು ಕಾಯುತ್ತಿದ್ದು ಇದರಿಂದಾಗಿ ನಮ್ಮ ಸುತ್ತಲಿನ ಶತ್ರುದೇಶಗಳ ಉಪಟಳಗಳನ್ನು ದಿಟ್ಟವಾಗಿ ಎದುರಿಸಿ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಅದೇ ರೀತಿ ದೇಶದೊಳಗಿನ ಮತಾಂಧರ ಭಯೋತ್ಪಾಧನೆ-ಸಂಘರ್ಷಗಳನ್ನು ಎದುರಿಸಲು ಯಾವುದೇ ಹೋರಾಟಗಳಿಗೂ ಯುವ ಸಮೂಹ ಸದಾ ಸಿದ್ಧರಾಗಬೇಕು ಭಾರತದ ಅಖಂಡತೆಗೆ ಧಕ್ಕೆ ಬಂದ ನೈಜ ಇತಿಹಾಸವನ್ನು ಭಾರತೀಯರು ತಿಳಿದುಕೊಳ್ಳಬೇಕು. ದೇಶದ ಭದ್ರತೆಗೆ ಹಿಂದೂ ಸಮಾಜ ಒಂದಾಗಬೇಕು. ಸ್ವಾತಂತ್ರ್ಯ ಲಭಿಸಿದ್ದು ಸಾವಿರಾರು ಮಂದಿಯ ಬಲಿದಾನದಿಂದ ಎಂದರು.
ತಾಲೂಕು ಸೇರಿದಂತೆ ವಿವಿಧ ಹೋಬಳಿ ಕೇಂದ್ರಗಳಿಂದ ಆಗಮಿಸಿದ ಹಿಂದು ಜಾಗರಣ ವೇದಿಕೆಯ ಸದಸ್ಯರು ಹಾಗೂ ಮಾಜಿ ಯೋಧರು ಇತರೆ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು. ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ನೂರಾರು ದೇಶಭಕ್ತರು, ಮಹಿಳೆಯರು, ಮಕ್ಕಳು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪೋಲೀಸರು ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post