ಕಲ್ಪ ಮೀಡಿಯಾ ಹೌಸ್ | ಸೊರಬ |
ಕಚೇರಿಗಳಲ್ಲಿ ಕೆಲಸ ನಿರ್ವಹಿಸಲು ಹಲವಾರು ಮೂಲಭೂತ ಸಮಸ್ಯೆಗಳಿದ್ದು ಮುಖ್ಯವಾಗಿ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಸೊರಬ ತಾಲೂಕು ಸಮಿತಿ ಅಧ್ಯಕ್ಷ ಯಶವಂತ್ ಆರೋಪಿಸಿದರು.
ಗುರುವಾರ ತಾಲ್ಲೂಕು ಕಛೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕಪ್ಪು ಪಟ್ಟಿ ಧರಿಸಿ, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ನಮಗೆ ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಹಾಗೂ ಲ್ಯಾಪ್ ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್ ನೆಟ್ ಹಾಗೂ ಸ್ಕ್ಯಾನರ್ ಗಳನ್ನು ಒದಗಿಸದೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ಕ್ಷೇತ್ರಮಟ್ಟದಲ್ಲಿ ಅಧಿಕ ಒತ್ತಡದೊಂದಿಗೆ ಕೆಲವು ಗ್ರಾಮ ಆಡಳಿತ ಅಧಿಕಾರಿಗಳ ಸಾವು ನೋವುಗಳು ಆಗುತ್ತಿದೆ. ಎಲ್ಲಾ ಮೊಬೈಲ್ ಆಪ್ ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿರುತ್ತದೆ.
Also read: ಬಲಿಷ್ಠ ಕರ್ನಾಟಕ ನಿರ್ಮಾಣ ಕ್ವಿನ್ ಸಿಟಿ ಯೋಜನೆಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್
ವೃತ್ತಕ್ಕೆ ಒಂದರಂತೆ ಉತ್ತಮ ಮೊಬೈಲ್, ಸಿಯುಜಿ ಸಿಮ್ ಡೇಟಾ, ಲ್ಯಾಪ್ ಟಾಪ್/ಗೂಗಲ್ ಕ್ರೋಮ್ ಬುಕ್, ಪ್ರಿಂಟರ್, ಸ್ಕ್ಯಾನರ್ ಇಂಟರ್ನೆಟ್ ಕಚೇರಿಗಳಲ್ಲಿ ಉತ್ತಮ ಗುಣಮಟ್ಟದ ಟೇಬಲ್ ಕುರ್ಚಿ,ಮತ್ತು ಅಲ್ಮೆರಾ, ಸೌಲಭ್ಯಗಳನ್ನು ನೀಡಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಪದೋನ್ನತಿಯಲ್ಲಿ ವಂಚಿತರಾಗಿ ಸುಮಾರು 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ, ರಾಜ್ಯದಲ್ಲಿನ 1196 ಗ್ರೇಡ್-1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು “ಗ್ರೇಡ್-1 ಗ್ರಾಮ ಆಡಳಿತ. ಅಧಿಕಾರಿ” ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು/ಪ್ರಥಮ ದರ್ಜೆ ಸಹಾಯಕರು/ ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರೀಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ಮಾಡಬೇಕು.
ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆಯ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ವರ್ಗಾವಣೆ ಆದೇಶ,ಕೆ.ಸಿ.ಎನ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡಬೇಕು. ಕಂದಾಯ ಇಲಾಖೆಯ ಪ್ರತಿವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸುವುದು,ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯ ಮಟ್ಟದ ಜೇಶ್ಟತೆಯನ್ನಗಿ ಪರಿಗಣಿಸುವ ಬಗ್ಗೆಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯುವ ಬಗ್ಗೆ, ಪ್ರಯಾಣ ಭತ್ಯೆ ದರವನ್ನು 500/- ರೂಗಳಿಂದ 3000/- ರೂಗಳಿಗೆ ಹೆಚ್ಚುವರಿ ಮಾಡುವ ಬಗ್ಗೆ ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ನಭೆಗಳನ್ನು ಕಡ್ಡಾಯವಾಗಿ ನಿಷೇಧಿಸುವ ಬಗ್ಗೆ ವಿಶೇಷ ಚೇತನ ಹಾಗೂ ಕೆಲವು ಅನಾರೋಗ್ಯ ಪ್ರಕರಣಗಳನ್ನು ಹೊರತುಪಡಿಸಿ, ತಾಲ್ಲೂಕು ಕಛೇರಿ/ ಉಪವಿಭಾಗಾಧಿಕಾರಿಗಳ ಕಛೇರಿ/ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ವೃತ್ತಗಳಿಗೆ ಕರ್ತವ್ಯ ನಿರ್ವಹಿಸಲು ಆದೇಶಿಸುವ ಬಗ್ಗೆ ಈಗೆ ಹಲವಾರು ಬೇಡಿಕೆಗಳು ಇದೆ.ಅಲ್ಲದೆ ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆಯನ್ನು ಒದಗಿಸಬೇಕು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ತಹಶೀಲ್ದಾರ್ ಮಂಜುಳಾ ಹೆಗಡಾಳ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ಮಾಡಲಾಗುವುದು ಎಂದರು.
ಸಮಿತಿಯ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಸುಧೀರ್ ಕಾನಡೆ, ಉಪಾಧ್ಯಕ್ಷ ವೀರೇಂದ್ರ ಆರ್., ಕಾರ್ಯದರ್ಶಿ ಸಮೀರ್ ಕಳಾವಂತ್, ಖಜಾಂಚಿ ಸುಮಾ ಸತ್ತಣ್ಣನವರ್, ಸಂ. ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ಮಂಜಪ್ಪ, ಕಾರ್ಯದರ್ಶಿಗಳಾದ ಲೋಹಿತ್ ಕುಮಾರ್, ಇಮಾಂ ಖಾಸಿಂ, ಮಂಜಪ್ಪ ಡಿ.ಪಿ, ಭಾರತಿ ಪಾಟೀಲ್, ಯಲ್ಲಪ್ಪ ಚಿಗರಿ, ಗಿರಿಮಲ್ಲಪ್ಪ ಉಳ್ಳಾಗಡ್ಡಿ, ಉಮೇಶ್, ವಿನಯ್ ಎಸ್. ಹೆಚ್., ಜಂಗಪ್ಪ ಗೌಡ ಬೀರಾದಾರ್, ಶ್ರೀಶೈಲ ಮದಪ್ಪ ಬಗಲಿ, ರಂಜಿತಾ ಬಿ. ಎನ್., ಮಲ್ಲಪ್ಪ ಗದ್ದಿ, ಸ್ಂಗ್‌ಗೀಚ್ನ್, ಗಾಯಿತ್ರಿ ಕೆ.ಬಿ., ದಾನೇಶ್ ಚಂಬಾರ್, ಜಿಲ್ಲಾ ಸಂಘದ ನಿರ್ದೇಶಕರಾದ ಮುತ್ತು ಕುಮಾರ್, ಮಂಜಪ್ಪ, ಮಾರುತಿ ಕೆ.ಟಿ. ಶ್ರೀಕಾಂತ್, ಜಯಪ್ಪ ತುಮರಿಕೊಪ್ಪ, ರಮೇಶ ಕವಟೆಕರ್, ಸಲೀಂ ಟಾಕಲಿ, ಮಲ್ಲಪ್ಪ ಬಿಜ್ಜರಗಿ ಸೇರಿದಂತೆ ನೂರಾರು ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ವರದಿ: ಮಧು ರಾಮ್ ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post