ಕಲ್ಪ ಮೀಡಿಯಾ ಹೌಸ್ | ಸೊರಬ |
ಮನೆಯ ಇ – ಖಾತೆ ಮಾಡಿಕೊಡಲು ವ್ಯಕ್ತಿಯೋರ್ವರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ (ಪಿಡಿಓ)ಯನ್ನು #Grama Panchayath PDO, ಲಂಚದ ಹಣ ಸಮೇತ ಲೋಕಾಯುಕ್ತ ಪೊಲೀಸರು #Lokayuktha Police ವಶಕ್ಕೆ ಪಡೆದ ಘಟನೆ ಸೊರಬ ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಇಂಡುವಳ್ಳಿ ಗ್ರಾಮ ಪಂಚಾಯ್ತಿಯ ಪ್ರಭಾರ ಪಿಡಿಓ ಈಶ್ವರಪ್ಪ ಇಂದು ಬೆಳಿಗ್ಗೆ ಪಟ್ಟಣದ ಪೋಸ್ಟ್ ಆಫೀಸ್ ಕಚೇರಿ ಬಳಿ ಲಂಚ ಪಡೆಯುವ ವೇಳೆ, ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Also read: ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಇಬ್ಬರ ಸಂಶೋಧನಾತ್ಮಕ ಪ್ರಬಂಧ ಐಸಿಎಂಆರ್’ಗೆ ಆಯ್ಕೆ

ಪ್ರಕರಣದ ಹಿನ್ನೆಲೆ :
ದೂರುದಾರ ಮೊಹಮ್ಮದ್ ಗೌಸ್ ಎಂಬುವರ ತಂದೆ ಭಾಷಾಸಾಬ್ ಎಂಬುವರಿಗೆ ಇಂಡುವಳ್ಳಿ ಗ್ರಾಮದಲ್ಲಿ ಜಮೀನಿದ್ದು, ಅದರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ತಾಯಿ ಮಮ್ತಾಜ್ ಹೆಸರಿನಲ್ಲಿ ಇ – ಖಾತೆ ಮಾಡಿಕೊಡುವಂತೆ ಮೊಹಮ್ಮದ್ ಗೌಸ್ ಅವರು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಪ್ರಭಾರ ಪಿಡಿಓ ಈಶ್ವರಪ್ಪ ಅವರು ಮನೆ ಜಾಗದ ಅಳತೆ ಮಾಡಿಕೊಂಡು ಹೋಗಿದ್ದರು. ಆದಾಗ್ಯೂ ಇ – ಖಾತೆ ಮಾಡಿಕೊಟ್ಟಿರಲಿಲ್ಲ. ಡಿ.20 ರಂದು 5 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮೊಹಮ್ಮದ್ ಗೌಸ್ ಅವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post