ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದಾದ್ಯಂತ 78ನೇ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ ಪಟ್ಟಣದ ಹಲವು ಕಚೇರಿ ಹಾಗೂ ಬ್ಯಾಂಕ್’ಗಳಲ್ಲಿ ಧ್ವಜಾರೋಹಣ ಮಾಡದೇ ನಿರ್ಲಕ್ಷ್ಯ ಮೆರೆದಿದ್ದು, ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೊರಬ ಪಟ್ಟಣದಲ್ಲಿರುವ ಮುತ್ತೂಟ್ ಫೈನಾನ್ಸ್ ಮುತ್ತೂಟ್ ಫಿನ್ ಕಾರ್ಪ್, ಎಚ್’ಡಿಎಫ್’ಸಿ ಬ್ಯಾಂಕ್, ಸಹ್ಯಾದ್ರಿ ಚಿಟ್ಸ್ ಫಂಡ್ಸ್, ಕರ್ನಾಟಕ ಬ್ಯಾಂಕ್, ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ, ಚಮ್ಮನೂರ್ ಕ್ರೆಡಿಟ್ ಅಂಡ್ ಇನ್ವೆಸ್ಟ್ಮೆಂಟ್ ಲಿಮಿಟೆಡ್, ಐಐಎಫ್‌ಎಲ್ ಬ್ಯಾಂಕ್ ಈ ಎಲ್ಲಾ ಸಂಸ್ಥೆಗಳು ರಾಷ್ಟ್ರ ಧ್ವಜಾರೋಹಣ ಮಾಡದೇ ಅಗೌರವ ತರುವ ಕೆಲಸ ಮಾಡಿದ್ದಾರೆ.
ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರೋತ್ಸವನ್ನು ಆಚರಣೆ ಮಾಡದೆ ಇರುವುದು ಇವರ ದೇಶಪ್ರೇಮವನ್ನು ಎತ್ತಿ ತೋರಿಸುವಂತಿದೆ. ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲೇ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಅಧಿಕಾರಿಗಳು ಯಾವ ರೀತಿ ಕೆಲಸ ಕಾರ್ಯ ನಿರ್ವಹಿಸುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
Also read: ಯುವಕರು ದುಶ್ಚಟಗಳಿಂದ ದೂರಾದರೆ ಅದೇ ಸ್ವಾತಂತ್ರ: ತಹಶೀಲ್ದಾರ್ ಮಂಜುಳಾ
ಇನ್ನು, ಈ ಕುರಿತಂತೆ ವಿಚಾರ ತಹಶೀಲ್ದಾರ್ ಮಂಜುಳಾ ಅವರ ಗಮನಕ್ಕೂ ಸಹ ತಲುಪಿದ್ದು, ಧ್ವಜಾರೋಹಣ ಮಾಡದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತಾಗಿ ಚಿಂತಿಸಲಾಗುತ್ತದೆ ಎಂದು ಹೇಳಲಾಗಿದೆ.
ಯಾವುದೇ ರೀತಿ ಕಟ್ಟಡ ಜಾಗದ ವ್ಯವಸ್ಥೆ ಇಲ್ಲದೆ ಸ್ವಯಂ ಪ್ರೇರಿತರಾಗಿ ಆಟೋ ಮತ್ತು ಹಮಾಲರ ಸಂಘಗಳು ಹಬ್ಬದಂತೆ ಸ್ವಾತಂತ್ರೋತ್ಸವನ್ನು ಆಚರಣೆ ಮಾಡಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವಕ್ತಪಡಿಸಿದ್ದಾರೆ. ಇವರೊಟ್ಟಿಗೆ ರೈತರಿಗೆ ಇರುವಂತಹ ಪರಿಕಲ್ಪನೆಗಳು ಈ ವಿದ್ಯಾವಂತರಿಗೆ ಇಲ್ಲದಿರುವುದು ಒಂದು ನೋವಿನ ಸಂಗತಿ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳನ್ನು ಸಂಪರ್ಕಿಸಿದ್ದು ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ.
78ನೇ ಸ್ವಾತಂತ್ರೋತ್ಸವದ ದಿನ ಇಂತಹ ದೇಶಕ್ಕೆ ಅಗೌರವ ತರುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆಗಳ ವಿರುದ್ಧ ತಹಶೀಲ್ದಾರ್ ಕ್ರಮ ಕೈಗೊಳ್ಳುವರೇ ಕಾದುನೋಡಬೇಕಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post