ಕಲ್ಪ ಮೀಡಿಯಾ ಹೌಸ್ | ಸೊರಬ |
ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮತ್ತು ದೈಹಿಕ ಹಾಗೂ ಮಾನಸಿಕ ಸದೃಡತೆ ಹೊಂದಿ ಉತ್ತಮ ಆರೋಗ್ಯವನ್ನು ಹೊಂದಲು ಕ್ರೀಡಾ ಚಟುವಟಿಕೆಗಳು ಪೂರಕವಾಗಿರುತ್ತವೆ ಎಂದು ಬಿಜೆಪಿ ಮುಖಂಡ ಸಮಾಜ ಸೇವಕ ದಂತ ವೈದ್ಯ ಡಾ. ಜ್ಞಾನೇಶ್ ಹೆಚ್.ಈ. ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿಯ ಕಡೇ ಜೋಳದ ಗುಡ್ಡೆ ಗ್ರಾಮದಲ್ಲಿ ಶ್ರೀ ನಾಗ ಚೌಡೇಶ್ವರಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಇಂದು ಅನೇಕ ಆಟಗಾರರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ ಗ್ರಾಮೀಣ ಕ್ರೀಡೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಕರು ಮುಂದಾಗುತ್ತಿರುವುದು ಅತ್ಯಂತ ಶ್ಲಾಘನೀಯ. ಕ್ರೀಡೆಗೆ ಮನಸ್ಸಿನ ನೋವು ಸಂಕಟಗಳನ್ನು ದೂರ ಮಾಡುವ ಶಕ್ತಿ ಇದೆ . ಇಂತಹ ಯುವಕರಿಗೆ ಸರ್ಕಾರ ಹೆಚ್ಚಿನ ಆದ್ಯತೆ ಹಾಗೂ ಸಹಕಾರ ನೀಡಬೇಕು ಎಂದ ಅವರು ಇಂದಿನ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಅವರು ಮೊದಲು ಮನೆಗೆ ಒಳ್ಳೆಯ ಮಕ್ಕಳಾಗಿ ಬೆಳೆದಾಗ ಸಮಾಜವು ಅವರನ್ನು ಗೌರವದಿಂದ ಕಾಣುತ್ತದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು ಮಾತನಾಡಿ ಆಧುನಿಕತೆಯ ಪ್ರಭಾವದ ನಡುವೆಯೂ ಪರಂಪರಾಗತವಾಗಿ ಬೆಳೆದು ಬಂದ ಗ್ರಾಮೀಣ ಕ್ರೀಡೆಗಳು ಉಳಿದು ಬರಲು ಯುವಕರೆ ಕಾರಣ ಇಂತಹ ಕ್ರೀಡಾಕೂಟಗಳಿಗೆ ಸಮಾಜ ಸೇವಕರು, ಜನಪ್ರತಿನಿಧಿಗಳು ಹೆಚ್ಚಿನ ಸಹಕಾರ ನೀಡಿದಾಗ ಕ್ರೀಡಾಕೂಟಕ್ಕೆ ಇನ್ನಷ್ಟು ಪ್ರೇರಣೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.
ಬಿಜೆಪಿ ತಾಲೂಕು ಯುವ ಮೋರ್ಚಾ ಘಟಕದ ಅಧ್ಯಕ್ಷ ರಾಜು ಮಾವಿನ ಬಳ್ಳಿಕೊಪ್ಪ ಮಾತನಾಡಿ ಕಡೇ ಜೋಳದ ಗುಡ್ಡೆ ಗ್ರಾಮ ಅತ್ಯಂತ ಚಿಕ್ಕ ಗ್ರಾಮವಾಗಿದ್ದರು ಒಗ್ಗಟ್ಟಿನಿಂದ ಇಂತಹ ಕ್ರೀಡಾಕೂಟವನ್ನು ಸತತವಾಗಿ ನಡೆಸಿಕೊಂಡು ಬಂದಿರುವುದು ಮಾದರಿಯಾಗಿದೆ ತಮ್ಮ ಗ್ರಾಮಕ್ಕಾಗಿ ಕ್ರೀಡಾಕೂಟಕ್ಕೆ ಒಂದು ವಿಶಾಲವಾದ ಕ್ರೀಡಾಂಗಣವನ್ನು ಉಳಿಸಿಕೊಂಡು ಇನ್ನೊಂದು ಗ್ರಾಮಕ್ಕೆ ಮಾದರಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಲಿಯಪ್ಪ ಗಾಡಿಗೇರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಸನ್ನ ಶೇಟ್, ಲೋಕೇಶ್, ಅಣ್ಣಪ್ಪ ಅಚಾರಿ, ಕನ್ನಪ್ಪ, ಪರಶುರಾಮ್, ದ್ಯಾವಪ್ಪ,ಕಾಮಪ್ಪ, ಗಣಪತಿ,ಮಾಸ್ತ್ಯಪ್ಪ, ತಿಮ್ಮಪ್ಪ, ರಾಮಚಂದ್ರ, ರಘು,ಗುತ್ಯಪ್ಪ, ವೆಂಕಟೇಶ್,ರವಿ ಸೇರಿದಂತೆ ಮೊದಲಾದವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















