ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಂಘಿಕ ಮನೋಭಾವದ ಕಾರ್ಯಗಳಿಂದ ಯಶಸ್ಸು ಸಾಧಿಸಬಹುದು. ಸರ್ಕಾರಿ ಕಾರ್ಯಕ್ರಮಗಳು ಹೀಗೆ ಸಾರ್ವಜನಿಕವಾಗಿ ಪಾಲ್ಗೊಂಡರೆ ಯಾವುದೆ ಅನುಷ್ಠಾನಗಳು ಅರ್ಥಪೂರ್ಣ ಎನಿಸುತ್ತದೆ ಎಂದು ಉದ್ರಿ ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಸುರೇಶ್ ಹೇಳಿದರು.
ತಾಲ್ಲೂಕು ಉದ್ರಿ ಸಪ್ರೌಶಾಲೆ ಆವರಣದಲ್ಲಿ ವೃಕ್ಷಾರೋಪಣ ನೆರವೇರಿಸಿ ಅವರು ಮಾತನಾಡಿ, ಡಾಕ್ಟರ್ ಮಹೇಶ್ ಎಂ. ಕೆ. ವೈದ್ಯಾಧಿಕಾರಿಗಳು ಉದ್ರಿ ಇವರು ಪ್ರಾಸ್ತವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಸ್ತಳೀಯ ಆಡಳಿತ, ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದರು.
ಪಿಎಸ್ಐ ಮಾಳಪ್ಪ, ತಾಲ್ಲೂಕು ವೈದ್ಯಾಧಿಕಾರಿ ಪ್ರಭು ಸಾಹುಕಾರ್, ಪರ್ಯಾವರಣ ಸಂರಕ್ಷಣಾ ಗತಿವಿಧಿ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಹಾಗೂ ಉದ್ರಿ ಗ್ರಾಪಂ ಅಧಿಕಾರಿ ಹೋಮೇಶ್, ವಿವಿಧ ಇಲಾಖೆ ಅಧಿಕಾರಿಗಳು ಗಿಡನೆಟ್ಟರು.
ಇಲ್ಲಿನ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಶ್ ಸಾರಥ್ಯದಲ್ಲಿ ನೂರಕ್ಕೂ ಅಧಿಕ ಅಮೂಲ್ಯ ಗಿಡಗಳನ್ನು ನೆಡಲಾಯಿತು. ಪ್ರೌಢಶಾಲಾ ಮಕ್ಕಳು ಉದ್ರಿ ಗ್ರಾಮದಲ್ಲಿ ಪರಿಸರ ಜಾಗೃತಿ ಕುರಿತ ಜಾಥಾ ನಡೆಸಿದರು.
ಗ್ರಾಪಂ ಉಪಾಧ್ಯಕ್ಷ ಬಸವರಾಜ್, ಸದಸ್ಯರುಗಳು , ಸಿಬ್ಬಂದಿ, ಡಿವೈಆರ್ಎಫ್ಒ ರಾಘವನ್, ಅರಣ್ಯ ಇಲಾಖೆ ಸಿಬ್ಬಂದಿ, ಮುಖ್ಯ ಶಿಕ್ಷಕ ಖಲೀಲ್ ಅಹಮದ್, ಶಿಕ್ಷಕ ವೃಂದ, ಕರವೇ ಅಧ್ಯಕ್ಷ ಬಲಿಂದ್ರಪ್ಪ, ಸ್ಪೂರ್ತಿ ಫೌಂಡೇಷನ್ ಶಿರಾಳಕೊಪ್ಪ ಇದರ ಅಧ್ಯಕ್ಷ ಪದಾಧಿಕಾರಿಗಳು, ಉದ್ರಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಮಕ್ಕಳು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















