ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾರ್ವಜನಿಕರ ಆಸ್ತಿ ನೋಂದಣಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸುಲಭಗೊಳಿಸಲು ಸರಕಾರ ಕಾವೇರಿ-2.0 Kaveri-2.0 ತಂತ್ರಾಂಶವನ್ನು ಪರಿಚಯಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ನೋಂದಣಿ ಅಧಿಕಾರಿ ಗಿರೀಶ್ ಭಿಸ್ಟನ ಗೌಡರ್ ಸಲಹೆ ನೀಡಿದರು.
ನಗರದ ಉಪ ನೋಂದವಣೆ ಕಛೇರಿಯಲ್ಲಿ ಕಾವೇರಿ 2.0 ತಂತ್ರಾಂಶದ ಉದ್ಘಾಟನೆ ಮಾಡಿ ನೋಂದಣಿ ಮಾಡಿಕೊಂಡ ಫಲಾನುಭವಿಗೆ ದಸ್ತಾವೇಜು ವಿತರಿಸಿ ಮಾಹಿತಿ ನೀಡಿದರು

Also read: ಕಾಂಗ್ರೆಸ್’ನ 5 ಗ್ಯಾರೆಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
ದಿನವಿಡೀ ಕಾಯುವ ಅಗತ್ಯವಿಲ್ಲ
ಆಸ್ತಿ ನೋಂದಣಿ, ಕ್ರಯ, ಕರಾರು, ದಾನ, ಒಪ್ಪಂದ ಕರಾರು ಮತ್ತು ವಿಲ್ ಸೇರಿದಂತೆ ಇತರೆ ಸೇವೆಗಳನ್ನು ಸಾರ್ವಜನಿಕರು ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ದಿನವಿಡೀ ಕಾಯುವ ತಾಪತ್ರಯ ಇರುವುದಿಲ್ಲ. ಕಾವೇರಿ-2 ವೆಬ್‌ಸೈಟ್‌ನಲ್ಲಿಲಾಗಿನ್ ಆಗಿ ಮನೆಯಿಂದಲೇ ಆಸ್ತಿ ನೋಂದಣಿ ಮತ್ತಿತರ ಸೇವೆ ಪಡೆಯಬಹುದಾಗಿದೆ ಎಂದರು.

ಕಾವೇರಿ ತಂತ್ರಾಂಶ-2.0 ಬಳಕೆಯಿಂದ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಯ ಕಾರ್ಯವೈಖರಿಯೂ ಸಂಪೂರ್ಣ ಬದಲಾಗಲಿದೆ. ಜತೆಗೆ ಆಸ್ತಿ ನೋಂದಣಿ ಪ್ರಕ್ರಿಯೆ ಸರಳ ಮತ್ತು ಸುಸೂತ್ರವಾಗಲಿದೆ. ನಕಲಿ ದಾಖಲೆಗಳ ಮೂಲಕ ವಂಚನೆ ಮಾಡುವ ಮತ್ತಿತರ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಹೊಸ ಜನಸ್ನೇಹಿ ತಂತ್ರಾಂಶವನ್ನು ಯಶಸ್ವಿಗೊಳಿಸಲು ಕರೆನೀಡಿದರು.
ಕಾರ್ಯಕ್ರಮದಲ್ಲಿ ಉಪ ನೋಂದಣಿ ಅಧಿಕಾರಿ ರಾಹುಲ್ ಕೌಶಿಕ್, ಹೆಚ್.ಕೆ. ರವಿ, ಕಛೇರಿ ಸಿಬ್ಬಂದಿಗಳಾದ ಚೇತನ ಪೇಟೇಮಠ, ವಸಂತ, ವಿದ್ಯಾ, ಪ್ರಸಾದ್, ಪತ್ರ ಬರಹಗಾರರಾದ ಅನ್ನದಾನಪ್ಪ, ಗುಡ್ಡಪ್ಪ, ಪಿ.ಆರ್. ರಾಘವೇಂದ್ರ, ವಕೀಲರುಗಳಾದ ನಾಗರಾಜ್ ಎನ್.ಕೆ. ಉಲ್ಲಾಸ್ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post