ಕಲ್ಪ ಮೀಡಿಯಾ ಹೌಸ್ | ಸೊರಬ |
ಸುದೀರ್ಘ 20ಕ್ಕೂ ಅಧಿಕ ದಿನಗಳ ಕಾಲ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಬಹುತೇಕ ಗ್ರಾಮಾಂತರ ಪ್ರದೇಶದ ರಸ್ತೆ, ಚರಂಡಿ, ವಿದ್ಯುತ್ ಸರಬರಾಜು ತೀರಾ ಹದಗೆಟ್ಟಿದೆ. ಯಾವುದೇ ಶಾಲಾ ವಾಹನ, ಆಟೋ, ಅಂಬ್ಯೂಲೆನ್ಸ್, ಗ್ಯಾಸ್ ಸಿಲಿಂಡರ್ ವಾಹನಗಳು ಜುಪ್ಪಯ್ಯ ಅಂದ್ರೂ ಬರಲೊಪ್ಪುತ್ತಿಲ್ಲ. ಅಷ್ಟ್ಯಾಕೆ, ಮನೆಗಳಲ್ಲಿ ಇರೋ ವಾಹನವನ್ನ ತಲೆ ಮೇಲೆ ಹೊತ್ಕೊಂಡು ಮನೆ ಸೇರಬೇಕಾದಂತಹ ಪರಿಸ್ಥಿತಿಯಿದೆ. ಶಾಲೆಗೆ ಹೋಗುವ ಮಕ್ಕಳ ಸ್ಥಿತಿಯಂತೂ ಶೋಚನೀಯ.
ಯುನಿಫಾರ‍್ಮ್ ಕೊಳೆಯಾದರೆ ಶಾಲೆಗೆ ಸೇರಿಸುವುದಿಲ್ಲ ಎಂಬ ನೆಪ ಹೇಳಿ ಶಾಲೆಗೆ ಚಕ್ಕರ್. ಈ ಎಲ್ಲ ಸ್ಥಿತಿಯನ್ನು ಗಮನಿಸಿದ ತಾಲ್ಲೂಕು ಯಲಸಿ ಗ್ರಾಮದಲ್ಲಿ ಗ್ರಾಮಸ್ಥರು ಯಾವುದೇ ಮನವಿ, ಅಹವಾಲು, ದೂರು, ಆಪಾದನೆ ಇತ್ಯಾದಿ ಗೋಜಿಗೆ ಹೋಗದೆ ಮನೆಗೊಬ್ಬರಂತೆ ಊರಬಿಟ್ಟಿ ಮಾಡುವ ಮೂಲಕ ರಸ್ತೆ, ಕಾಲುವೆ ಸರಿಪಡಿಸಿ ಸೈ ಅನಿಸಿಕೊಂಡಿದ್ದಾರೆ.
ಇಲ್ಲಿನ ಗ್ರಾಮಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಸುಮಾರು 1ಕಿಮೀ ಸಿದ್ಧಾಪುರ, ಚಂದ್ರಗುತ್ತಿ ರಸ್ತೆ ಸಂಪರ್ಕವನ್ನು ಸುಗಮಗೊಳಿಸಿದರು. ಆಯಾ ಮನೆಯೆದುರಿನ ಕಾಲುವೆಗಳನ್ನು ಆಯಾ ಮನೆಯವರೆ ಸ್ವಚ್ಛಗೊಳಿಸಿದರು. ಪೂರ್ವಿಜರ ಗ್ರಾಮಬಿಟ್ಟಿ ಸೇವೆಯನ್ನು ಜೀವಂತ ಇರಿಸಿದ್ದು ಪ್ರಶಂಸೆಗೆ ಪಾತ್ರವಾಯಿತು.
Also read: ಜುಲೈ 30: ಶ್ರೀವಿದ್ಯಾ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸೈನ್ಸ್ ಎರಡನೇ ಘಟಿಕೋತ್ಸವ
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post