ಕಲ್ಪ ಮೀಡಿಯಾ ಹೌಸ್ | ಸೊರಬ |
ದೇವರನ್ನು ನಾವು ಎಲ್ಲೆಲ್ಲೋ ಹುಡುಕುತ್ತೇವೆ. ಆದರೆ, ಬಿದ್ದವರನ್ನು ಎತ್ತುವವನೇ ಶುದ್ದ ಮಾನವ ಎಂಬ ಮಾತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಹರಿಕಾರ ವೀರೇಂದ್ರ ಹೆಗಡೆಯವರಿಗೆ ಸಲ್ಲುತ್ತದೆ. ಸಕಲ ಜೀವಿಗಳ ಒಳಿತನ್ನ ಬಯಸುವವನೆ ನಿಜವಾದ ದೇವರು ಎಂದು ಜಡೆ ಸಂಸ್ಥಾನಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ತತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಕಬ್ಬೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತೋಟದ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಕೆರೆ ಸಮಿತಿಗೆ ಕೆರೆ ಹಸ್ತಾಂತರ ಮಾಡಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಈವರೆಗೆ ರಾಜ್ಯದ್ಯಂತ 458 ಕೆರೆ ಹೂಳೆತ್ತಲಾಗಿದೆ. ಹಿರೆಕಬ್ಬೂರು ಕೆರೆಗೆ ಯೋಜನೆಯಿಂದ ರೂ.9.96 ಲಕ್ಷ ವಿನಿಯೋಗಿಸಲಾಗಿದೆ. ಕೆರೆಗಳನ್ನು ಹೂಳೆತ್ತಿ ಹೆಚ್ಚು ನೀರು ನಿಲ್ಲುವಂತೆ ಮಾಡುವುದರಿಂದ ಅಂತರ್ಜಲ ಹೆಚ್ಚಾಗುವುದರೊಂದಿಗೆ ಸಸ್ಯ ಸಂಪತ್ತು ಸಂರಕ್ಷಣೆ ಮಾಡಿ ಬರಗಾಲವನ್ನು ದೂರ ಮಾಡಲು ಅವಕಾಶವಿದೆ ಎಂದರು.
ಮುಖ್ಯ ಅತಿಥಿ ತಾಪಂ ಇಒ ಕುಮಾರ್ ಕೆರೆಗೆ ಬಾಗಿನ ಸಲ್ಲಿಸಿ, ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಇಲ್ಲಿ ಕೆರೆ ಪುನಶ್ಚೇತನ ಅಗತ್ಯವಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರತಿ ವರ್ಷ ರಾಜ್ಯದಾದ್ಯಂತ ಕೆರೆಗಳನ್ನು ಪುನಶ್ಚೇತನ ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಕೆರೆ ಸಮಿತಿ ಅಧ್ಯಕ್ಷ ರಂಗಪ್ಪ, ಪಿ.ಡಿ.ಒ. ಶಿವರಾಜ, ಆಡಳಿತಾಧಿಕಾರಿ ಹೆಚ್. ಆಂಜನೇಯ, ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಕೆರೆ ಸಮಿತಿ ಸದಸ್ಯ ಕೃಷ್ಣಮೂರ್ತಿ, ಕೃಷಿ ಮೇಲ್ವಿಚಾರಕ ಲೋಕೇಶ್, ಮೇಲ್ವಿಚಾರಕರಾದ ರಾಜಪ್ಪ, ಮಾರುತಿ ಹಾಗೂ ಸೇವಾಪ್ರತಿನಿಧಿಗಳು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post