ಕಲ್ಪ ಮೀಡಿಯಾ ಹೌಸ್ | ಸೊರಬ |
ದೇಶದ ಶಾಂತಿ ಕದಡುತ್ತಿರುವ ಎಲ್ಲ ಭಯೋತ್ಪಾದಕ ಸಂಘಟನೆಗಳನ್ನು ಕೂಡಲೇ ನಿಷೇದಿಸಿ, ಜನಸಾಮಾನ್ಯರ ಹಿತ ಕಾಯಬೇಕಾದುದು ಆಡಳಿತದ ಕರ್ತವ್ಯ. ಇಂತವರ ಕುಕೃತ್ಯದಿಂದಾಗಿ ಇಂದು ಸಾಮಾಜಿಕ ಭದ್ರತೆ ಕ್ಷೀಣಿಸಿರುವುದು ತೀರಾ ಆತಂಕಕಾರಿ ಸಂಗತಿ ಎಂದು ವಿಹಿಂಪ ಮತ್ತು ಭಜರಂಗದಳ #VHP, Bajarangadala ಒಕ್ಕೊರಲ ದನಿಯಲ್ಲಿ ಪ್ರತಿಭಟಿಸುವ ಮೂಲಕ ಶಾಂತಯುತ ಹಾಗೂ ಶಿಸ್ತುಬದ್ಧ ಬಂದ್ ಆಚರಣೆಯನ್ನು ಪಟ್ಟಣದಲ್ಲಿ ನಡೆಸಿತು.
ಪಟ್ಟಣದ ಅಂಗಡಿ ಮುಂಗಟ್ಟುಗಳವರು ಸಂಪೂರ್ಣ ಬೆಂಬಲ ಸೂಚಿಸಿ ಬಂದ್‌ಗೆ ಸಹಕರಿಸಿದರು. ಶಿವಮೊಗ್ಗ ಘಟನೆಯಲ್ಲಿ ಮೃತಪಟ್ಟ ಹರ್ಷಾಗೆ #Harsha ನ್ಯಾಯಯುತ ಪರಿಹಾರದ ಜೊತೆಗೆ ಕುಟುಂಬಕ್ಕೆ ಮಾನವೀಕ ಧೈರ್ಯ ತುಂಬುವಲ್ಲಿ ಎಲ್ಲರ ಸಹಕಾರವಿರಬೇಕು. ಕುಕೃತ್ಯದ ಆರೋಪಿ ಬಂಧಿತರನ್ನು ಯಾವುದೇ ಮುಲಾಜಿಲ್ಲದೆ ನೇಣಿಗೇರಿಸಬೇಕು. ದೇಶದಲ್ಲಿ ಶಾಂತಿ ಕದಡಲು ಜಿಯಾದಿಗಳು ನಾನಾ ರೀತಿಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ದೇಶ ವಿರೋಧಿ ಕೃತ್ಯದಲ್ಲಿ ತೊಡಗಿರುವ ಎಸ್‌ಡಿಪಿಐ, ಪಿಎಫ್‌ಐ ಮತ್ತು ಸಿಎಫ್‌ಐನಂತ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಮುಂತಾದ ಘೋಷಣೆ ಹಾಕಿದರು. ಇವರೊಂದಿಗೆ ಮೆರವಣಿಗೆಯಲ್ಲಿ ಬಿಜೆಪಿ ಪಕ್ಷದವರು, ಹಿಂದೂ ಪರ ಕಾರ್ಯಕರ್ತರು ಕೈಜೋಡಿಸಿದ್ದರು.
Also read: ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಕಾನೂನು ಕ್ರಮ: ನಳಿನ್ ಕುಮಾರ್ ಕಟೀಲ್
ಕಾಳಿಂಗರಾಜ್ ವಿಹೆಚ್ ಪಿ ಅಧ್ಯಕ್ಷರು , ಪ್ರಶಾಂತ ಕೆ ಸಾಗರ್ ಕಾರ್ಯದರ್ಶಿ, ಹೆಚ್. ಎಲ್. ಚಂದನ್ ಜಿಲ್ಲಾ ಸಹ ಕಾರ್ಯದರ್ಶಿ,
ರಾಜು ಹಿರಾವಲಿ ನಗರಾಧಕ್ಷರು, ಅಶೋಕ ಚಿಲ್ಲೂರು ನಗರುಪಾಧಕ್ಷರು, ಶಶಿ ಬಜರಂಗದಳ ಸಂಚಾಲಕ, ಕೇಶವ ಪೆಟ್ಕರ್ ಸಂಘಟಕರು, ಲೋಕೇಶ್ ಸಂಚಾಲಕರು,
ವಿಹೆಚ್ ಪಿ ಮಾತೃ ಶಕ್ತಿ ಪ್ರಮುಖ ವಸಂತಿ ನಾವಡ, ಅನಿತಾ ದಾಮ್ಮೆ, ಶ್ಯಾಮಲಾ ಸುರೇಶ್, ಮಮತಾ ಕಾಳಿಂಗರಾಜ್, ರೂಪದರ್ಶಿನಿ, ಲಕ್ಷ್ಮಿ ಮುರಳಿಧರ್, ಮಧುರ, ದುರ್ಗಾವಾಹಿನಿಯ ಕೃತಿಕಾ ಪುರಾಣಿಕ್, ಶರತ್ ಬಜರಂಗದಳ ನಗರ ಸಂಚಾಲಕ, ರವಿ ಗುಡಿಗಾರ್ ಪುರಸಭೆ ಅಧ್ಯಕ್ಷ ಈರೆಶ್ ಮೇಸ್ತ್ರಿ, ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಪ್ರಕಾಶ್ ತಲಾಕಾಲಕೊಪ್ಪ, ಬಿಜೆಪಿ ಮುಖಂಡರಾದ ಎಂ. ಕೆ ಯೋಗಿಶ್ ಯುವಾಬ್ರಿಗೆಡ್ ಸಂಚಾಲಕ ಮಹೇಶ್ ಖಾರ್ವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಈರೇಶ್ ಗೌಡ ಮೊದಲಾದವರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post