ಕಲ್ಪ ಮೀಡಿಯಾ ಹೌಸ್ | ಉಡುಪಿ |
ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ #SaiPallavi ಅವರು ದೇವಾಲಯಗಳ ನಗರಿ ಉಡುಪಿಗೆ #Udupi ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಈ ಕುರಿತಂತೆ ಮಧೂರು ನಾರಾಯಣ ಶರಳಾಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ಸಾಯಿ ಪಲ್ಲವಿ ಅವರು, ನಿನ್ನೆ ಉಡುಪಿಗೆ #Udupi ಭೇಟಿ ನೀಡಿ ಶ್ರೀಕೃಷ್ಣಮಠಕ್ಕೆ #SriKrishna ತೆರಳಿದರು. ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಅವರು, ಕೆಲಕಾಲ ಪ್ರಾರ್ಥನೆ ಸಲ್ಲಿಸಿದರು.
ಆನಂತರ, ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಫಲ, ಮಂತ್ರಾಕ್ಷತೆ ಸಹಿತ ಆರ್ಶೀವಾದ ಪಡೆದುಕೊಂಡರು.
ಶ್ರೀಮಠದ ವತಿಯಿಂದ ಸಾಯಿ ಪಲ್ಲವಿ ಅವರನ್ನು ಗೌರವಿಸಲಾಯಿತು.
ಖಾಸಗಿ ಕಾರ್ಯ ನಿಮಿತ್ತ ಕರಾವಳಿಗೆ ಬಂದಿರುವ ಸೌತ್ ಸುಂದರಿ ಕೃಷ್ಣ ದೇವರ ದರ್ಶನ ಪಡೆದರು.
ಸಾಯಿ ಪಲ್ಲವಿ ಟಾಲಿವುಡ್ ನಟ ನಾಗ ಚೈತನ್ಯ ಜೊತೆಗೆ ಲವ್ ಸ್ಟೋರಿ ಸಿನಿಮಾ ಬಳಿಕ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post