ಕಲ್ಪ ಮೀಡಿಯಾ ಹೌಸ್ | ನೈಋತ್ಯ ರೈಲ್ವೆ |
2025–26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ South Western Railway ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿ, ಕಾರ್ಯಕ್ಷಮತೆಯಲ್ಲಿ ಹೊಸ ಧಾಖಲೆಯನ್ನು ಸ್ಥಾಪಿಸಿದೆ.
ಈ ಅವಧಿಯಲ್ಲಿ ವಲಯವು ₹5,347.40 ಕೋಟಿಗಳ ಸರಕು ಸಾಗಣೆ ಆದಾಯವನ್ನು ದಾಖಲಿಸಿದ್ದು, 2024–25ರಲ್ಲಿ ₹4,672 ಕೋಟಿಗಳ ಹಿಂದಿನ ದಾಖಲೆಯನ್ನು ಮೀರಿಸಿದೆ. ಒಟ್ಟು ಆದಾಯವು ₹8,489 ಕೋಟಿಗಳಿಂದ ₹9,488 ಕೋಟಿಗಳಿಗೆ ಏರಿಕೆಯಾಗಿ ವಲಯದ ಬಲವಾದ ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸಿದೆ.
ಪ್ರಯಾಣಿಕರ ವಿಭಾಗದಲ್ಲಿ ಆದಾಯವು ₹3,172.5 ಕೋಟಿಯಿಂದ ₹3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್ನಿಂದ 176.93 ಮಿಲಿಯನ್ಗೆ ಹೆಚ್ಚಳವಾಗಿದ್ದು, ಉತ್ತಮ ಬೆಳವಣಿಗೆಯನ್ನು ಕಂಡಿದೆ. ಇತರ ಆದಾಯ ಮೂಲಗಳಲ್ಲಿ, ಇತರ ಕೋಚಿಂಗ್ ಆದಾಯ ₹329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ ₹166.4 ಕೋಟಿಯಿಂದ ₹170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು ₹92.82 ಕೋಟಿಯಿಂದ ₹121.08 ಕೋಟಿಗೆ ಏರಿಕೆಯಾಗಿ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಜೊತೆಗೆ, ಟಿಕೆಟ್ ಪರಿಶೀಲನೆ ಆದಾಯವು ₹53.61 ಕೋಟಿಯಿಂದ ₹70.76 ಕೋಟಿಗೆ ಏರಿಕೆಯಾಗಿ ಒಟ್ಟು ಆದಾಯ ವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ.
2025–26ರಲ್ಲಿ ಸರಕು ಸಾಗಣೆಯ ಕಾರ್ಯಕ್ಷಮತೆ ಎಲ್ಲಾ ಸ್ಥರಗಳಲ್ಲಿ ಏರಿಕೆಯ ಪ್ರವೃತ್ತಿಯನ್ನು ಸಾಧಿಸಿದೆ. ಒಟ್ಟು ಲೋಡಿಂಗ್ 45.65 ಮಿಲಿಯನ್ ಟನ್ನಿಂದ 52.46 ಮಿಲಿಯನ್ ಟನ್ಗೆ ಏರಿಕೆಯಾಗಿ 6.81 ಮಿಲಿಯನ್ ಟನ್ಗಳ (14.9%) ಬೆಳವಣಿಗೆಯನ್ನು ದಾಖಲಿಸಿದೆ. ಕಬ್ಬಿಣದ ಅದಿರು 20.98 ಮಿಲಿಯನ್ ಟನ್ನೊಂದಿಗೆ ಅತಿ ಹೆಚ್ಚು ಕೊಡುಗೆ ನೀಡಿದರೆ, ಕಬ್ಬಿಣ ಮತ್ತು ಸಿದ್ಧ ಉಕ್ಕು 10.95 ಮಿಲಿಯನ್ ಟನ್ ಲೋಡಿಂಗ್ ಸಾಧಿಸಿದೆ, ಇದು 29.4% ಏರಿಕೆಯನ್ನು ಸೂಚಿಸುತ್ತದೆ.
ಕಲ್ಲಿದ್ದಲು ಲೋಡಿಂಗ್ 8.92 ಮಿಲಿಯನ್ ಟನ್ನಿಂದ 10.31 ಮಿಲಿಯನ್ ಟನ್ಗೆ ಏರಿಕೆಯಾಗಿ 15.6% ಬೆಳವಣಿಗೆಯನ್ನು ದಾಖಲಿಸಿದೆ. ಉಕ್ಕಿನ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಲ್ಲಿ 88.1% ಅತಿ ಹೆಚ್ಚು ಶೇಕಡಾವಾರು ಬೆಳವಣಿಗೆ ಕಂಡುಬಂದಿದೆ. ಇತರ ಸರಕುಗಳಲ್ಲಿ, ರಸಗೊಬ್ಬರ ಲೋಡಿಂಗ್ 1.13 ಮಿಲಿಯನ್ ಟನ್ನಿಂದ 1.18 ಮಿಲಿಯನ್ ಟನ್ಗೆ ಏರಿಕೆಯಾಗಿದೆ. ಕಂಟೇನರ್ ಸಂಚಾರವು 0.82 ಮಿಲಿಯನ್ ಟನ್ನಿಂದ 0.99 ಮಿಲಿಯನ್ ಟನ್ಗೆ ಏರಿಕೆಯಾಗಿ 21% ಬೆಳವಣಿಗೆಯನ್ನು ದಾಖಲಿಸಿದೆ. ಆಹಾರ ಧಾನ್ಯಗಳ ಲೋಡಿಂಗ್ ಕೂಡ 0.46 ಮಿಲಿಯನ್ ಟನ್ನಿಂದ 0.50 ಮಿಲಿಯನ್ ಟನ್ಗೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ಭಾರತೀಯ ರೈಲ್ವೆಯ ಒಟ್ಟು ಸರಕು ಸಾಗಣೆ 1,615 ಮಿಲಿಯನ್ ಟನ್ನಿಂದ 1,667.8 ಮಿಲಿಯನ್ ಟನ್ಗೆ ಏರಿಕೆಯಾಗಿದ್ದು, ಈ ಹೆಚ್ಚುವರಿ ಸಾಗಣೆಯಲ್ಲಿ ನೈಋತ್ಯ ರೈಲ್ವೆ ಸುಮಾರು 13% ಕೊಡುಗೆ ನೀಡಿದೆ.
ಮಾರ್ಚ್ 31, 2026 ರಂದು ಒಂದೇ ದಿನದಲ್ಲಿ 31 ರೇಕ್ಗಳನ್ನು ಲೋಡ್ ಮಾಡುವ ಮೂಲಕ ಫಿನಿಶ್ಡ್ ಸ್ಟೀಲ್ನಲ್ಲಿ ಹೊಸ ದಾಖಲೆ ನಿರ್ಮಿಸಲಾಗಿದ್ದು, 2025ರ 29 ರೇಕ್ಗಳ ಹಿಂದಿನ ದಾಖಲೆಯನ್ನು ಮೀರಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ನೈಋತ್ಯ ರೈಲ್ವೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವರ್ಷದಲ್ಲಿ 53 ರೂಟ್ ಕಿಲೋಮೀಟರ್ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಒಟ್ಟು ವಿದ್ಯುದ್ದೀಕೃತ ಮಾರ್ಗದ ಉದ್ದ 3,339 ಕಿಮೀ ಆಗಿದೆ. ಇದರ ಜೊತೆಗೆ, 24 ಕಿಲೋಮೀಟರ್ ಹೊಸ ರೈಲ್ವೆ ಮಾರ್ಗಗಳನ್ನು ಪ್ರಾರಂಭಿಸಲಾಗಿದ್ದು, 78.1 ಕಿಲೋಮೀಟರ್ ಡಬಲ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಸಾಮರ್ಥ್ಯ ಹೆಚ್ಚಳ ಮತ್ತು ಸಂಪರ್ಕ ಸುಧಾರಣೆ ಸಾಧ್ಯವಾಗಿದೆ.
ಸರಕು ಸಾಗಣೆ, ಆದಾಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಈ ಯಶಸ್ಸುಗಳು ನೈಋತ್ಯ ರೈಲ್ವೆಯ ಶ್ರೇಷ್ಠತೆ ಮತ್ತು ದಕ್ಷತೆಗೆ ಬದ್ಧತೆಯನ್ನು ತೋರಿಸುತ್ತವೆ. ಈ ಸಾಧನೆಗಳೊಂದಿಗೆ, ನೈಋತ್ಯ ರೈಲ್ವೆ ಭವಿಷ್ಯದಲ್ಲಿಯೂ ಉತ್ತಮ ಸಂಪರ್ಕ ಹಾಗೂ ನಿರಂತರ ಸೇವೆಗಳನ್ನು ಒದಗಿಸುವಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















